ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿಯ ಸಂತೇಕಲ್ಲಹಳ್ಳಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಕುಟುಂಬದ ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಮಾಜಿ ಶಾಸಕ ಡಾ ಎಂ.ಸಿ ಸುಧಾಕರ್ ಬಣಕ್ಕೆ ಸೇರ್ಪಡೆಗೊಂಡರು.
ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ಸ್ಥಳೀಯ ಶಾಸಕರು ಹಳ್ಳಿ ಫೈಟ್‌ಗೆ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಕೈವಾರ ಹೋಬಳಿಯ ಸಂತೇಕಲ್ಲಹಳ್ಳಿ ಗ್ರಾಮದ 40 ಕ್ಕೂ ಹೆಚ್ಚು ಕುಟುಂಬಗಳು ಮಾಜಿ ಶಾಸಕ ಎಂ.ಸಿ ಸುಧಾಕರ್ ನೇತೃತ್ವದಲ್ಲಿ ಇಂದು ಸೇರ್ಪಡೆಗೊಂಡರು. ಶಾಸಕ ಡಾ ಎಂ.ಸಿ ಸುಧಾಕರ್ ಅವರು ಹೂವಿನ ಹಾರ ಹಾಕಿ ತಮ್ಮ ಬಣಕ್ಕೆ ಬರಮಾಡಿಕೊಂಡು ಶುಭ ಹಾರೈಸಿದರು.
ಸಂತೇಕಲ್ಲಹಳ್ಳಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಇದಕ್ಕೆ ಬೇಸತ್ತು ಇಂದು ನಾವು ಜೆಡಿಎಸ್ ಪಕ್ಷ ತೊರೆದು ನಮ್ಮ ಸ್ವ ಇಚ್ಛೆಯಿಂದ ಮಾಜಿ ಶಾಸಕ ಡಾ.ಎಂ.ಸಿ ಸುಧಾಕರ್ ಬಣಕ್ಕೆ ಸೇರ್ಪಡೆಗೊಂಡಿದ್ದೇವೆ ಎಂದು ಪಕ್ಷಾಂತರ ಕಾರ್ಯಕರ್ತರು ಹೇಳಿದರು.