ಚಿಕ್ಕಬಳ್ಳಾಪುರ: ದೇಶವ್ಯಾಪ್ತಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದು ಜನತೆ ಬೆಚ್ಚಿಬಿದಿದ್ದಾರೆ. ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 4,000 ಸಾವಿರ ಗಡಿ ದಾಟಿದೆ. ಈ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯ 4 ಕೊರೊನಾ ಸೋಂಕಿತರು ಗುಣಮುಖರಾಗಿದ್ದು ಇಂದು ಬಿಡುಗಡೆಯಾಗಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 4 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಅವರನ್ನು ಬೀಳ್ಕೊಟ್ಟರು. ಈಗಾಗಲೇ ಗೌರಿಬಿದನೂರು ರೆಡ್ ಜೋನ್ ವ್ಯಾಪ್ತಿಯಲ್ಲಿದ್ದು ಇದುವರೆಗೂ 12 ಜನ ಕೊರೊನಾ ಸೊಂಕಿತರು ಪತ್ತೆಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಸದ್ಯ ಇಂದು 4 ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾದ ನಂತರ ಆಸ್ಪತ್ರೆಯ ಸಿಬ್ಬಂದಿ ಹಾಗೂ ಎಸಿ ರಘುನಂಧನ್ ಚಪ್ಪಾಳೆ ತಟ್ಟಿ ಹೂಗುಚ್ಚ ನೀಡಿ ಗೌರವ ಪೂರ್ವೂಕವಾಗಿ ಬೀಳ್ಕೊಡಿಗೆ ನೀಡಿದರು. ಇನ್ನು ಇವರು ಆಸ್ಪತ್ರೆಯಿಂದ ಹೊರ ಬಂದ ನಂತರ 14 ದಿನಗಳು ಕ್ವಾರೆಂಟೈನ್ನಲ್ಲಿ ನಿಗಾ ಇಡಲಾಗುತ್ತದೆ. ಸದ್ಯ ಚಿಕ್ಕಬಳ್ಳಾಪುರ 4 ಸೊಂಕಿತರು ಬಿಡುಗಡೆಯಾಗಿದ್ದು ಜಿಲ್ಲೆಯ ಜನತೆ ಕೊಂಚ ನಿಟ್ಟುಸಿರು ಬಿಡುವುವಂತಾಗಿದೆ.