ಚಿಕ್ಕಬಳ್ಳಾಪುರ : ಕಳೆದ ಒಂದು ವಾರದ ಹಿಂದೆ ಯಾವುದೇ ಸೋಂಕಿತರಿಲ್ಲದೆ ನೆಮ್ಮದಿಯತ್ತ ಸಾಗಿದ್ದ ಜಿಲ್ಲೆಗೆ ಇಂದು ಕೊರೊನಾ ಮಹಾಮಾರಿ ಮತ್ತೆ ಶಾಕ್ ಕೊಟ್ಟಿದೆ. ಇಂದು ಮತ್ತೆ 3 ಪ್ರಕರಣ ಧೃಡಪಟ್ಟಿರೋದು ಜಿಲ್ಲಾಡಳಿಕ್ಕೆ ತಲೆನೋವಾಗಿದೆ.
56 ಹಾಗೂ 25 ವರ್ಷದ ಮಹಿಳೆಯರಿಗೆ ಹಾಗೂ 20 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 155ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಟ್ಟು 11 ಜನ ಸೋಂಕಿತರು ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.