ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕು ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಸರ್ಕಾರಿ ಶಾಲೆಯ ಶಿಕ್ಷಕನೋರ್ವ ನಿರ್ಜನ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾದ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಪರಿಚಯಸ್ಥರೇ ಕೊಲೆ ಮಾಡಿರುವುದು ದೃಢವಾಗಿದೆ. ಸಲಿಂಗಕಾಮಕ್ಕಾಗಿ ಶಿಕ್ಷಕನ ಬಳಸಿಕೊಂಡು ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಜೊತೆಗೆ ಹಣ ಸಿಕ್ಕ ಬಳಿಕ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನು, ಮಂಜುನಾಥ್, ಶ್ರೀಕಾಂತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಆಕಾಶ್ ತಲೆಮರೆಸಿಕೊಂಡಿದ್ದಾರೆ.
ಏನಿದು ಘಟನೆ..?
ಜುಲೈ 4ರಂದು ಶಿಕ್ಷಕ ವಿಶ್ವನಾಥ್ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಬರುವುದಾಗಿ ಹೇಳಿ ಕಾಣೆಯಾಗಿದ್ದು ನಂತರ ಮುಂಜಾನೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ದಿನ ಸಂಜೆಯ ವೇಳೆಗೆ ನಗರದ ಹೊರವಲಯದಲ್ಲಿ ಬೆತ್ತಲಾಗಿ ವ್ಯಕ್ತಿಯ ಶವ ಪತ್ತೆಯಾಗಿತ್ತು, ಬಳಿಕ ಕೊಲೆಯಾದ ವ್ಯಕ್ತಿ ನಾಪತ್ತೆಯಾಗಿದ್ದ ಮಂಜುನಾಥ್ ಎಂದು ದೃಢಪಟ್ಟಿತ್ತು.
ಸಲಿಂಗ ಕಾಮವೇ ಮುಳುವಾಗಿತ್ತು
ಕೊಲೆಯಾದ ವಿಶ್ವನಾಥ್ ಹಾಗೂ ಆಕಾಶ್ ಗ್ರಿಂಡರ್ ಎಂಬ ಆ್ಯಪ್‌ನಲ್ಲಿ ಪರಿಚಯವಾಗಿದ್ದರು. ನಂತರ ಸಾಕಷ್ಟು ಬಾರಿ ಸಲಿಂಗ ಕಾಮ ನಡೆಸಿದ್ದಾರಂತೆ. ಅದರಂತೆ ಜುಲೈ 4ರಂದು ರಾತ್ರಿ ಸಲಿಂಗಕಾಮ ನಡೆಸಲು ಕರೆ ಮಾಡಿ ನಗರದ ಹೊರವಲಯಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಆಕಾಶ್ ತನ್ನ ಸ್ನೇಹಿತರಿಬ್ಬರಾದ ಮಂಜು ಹಾಗೂ ಮನು ಎಂಬುವವರನ್ನು ಅಲ್ಲಿಗೆ ಕರೆಸಿಕೊಂಡಿದ್ದಾನೆ.
ಸಲಿಂಗಕಾಮ ನಡೆಸುತ್ತಿದ್ದ ವೇಳೆ ಮೊದಲೇ ಮಾಡಿದ ಪ್ಲಾನ್‌ನಂತೆ ಕಂಠಪೂರ್ತಿ ಕುಡಿದು ಆಕಾಶ್ ಸ್ನೇಹಿತರು ಎಂಟ್ರಿ ಕೊಟ್ಟಿದ್ದಾರೆ. ತನ್ನ ಪ್ಯಾಂಟ್‌ನಿಂದ ವಿಶ್ವನಾಥ್ ಕಾಲುಗಳನ್ನು ಕಟ್ಟಿ ಹಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಎಟಿಎಂ ಪಾಸವರ್ಡ್ ಹೇಳುವಂತೆ ಪೀಡಿಸಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ಅಲ್ಲಿಯೇ ಥಳಿಸಿದ್ದಾರೆ.
ಬಳಿಕ ಪಾಸ್ವರ್ಡ್ ಪಡೆದು ಮೂರು ಬಾರಿ 10 ಸಾವಿರ ರೂಪಾಯಿಯನ್ನ ಖಾತೆಗೆ ಜಮಾ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಥಳಿತಕ್ಕೊಳಗಾದ ವಿಶ್ವನಾಥ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ರಾತ್ರಿ ಬೈಕ್ ನಿಲ್ಲಿಸುವುದಾಗಿ ಪತ್ನಿಗೆ ಹೇಳಿ ಹೋಗಿದ್ದ ಶಿಕ್ಷಕ ಬೆಳಗ್ಗೆ ನಗ್ನ ಶವವಾಗಿ ಪತ್ತೆ! ಅಲ್ಲಿ ನಡೆದಿದ್ದೇನು?