ETV Bharat / state

ಬಾಗೇಪಲ್ಲಿ: 22 ಅಭ್ಯರ್ಥಿಗಳು ಅವಿರೋಧ ಆಯ್ಕೆ, ಅಂತಿಮ ಕಣದಲ್ಲಿ 1,038 ಮಂದಿ - Bagepalli taluk gram panchayath elelction

ಬಾಗೇಪಲ್ಲಿ ತಾಲೂಕಿನ 25 ಗ್ರಾಮ ಪಂಚಾಯತಿಗಳ 402 ಸ್ಥಾನಗಳಿಗೆ 1,495 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 26 ತಿರಸ್ಕೃತವಾಗಿದ್ದು, ಅಂತಿಮವಾಗಿ 1,038 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

chikkaballapur
chikkaballapur
author img

By

Published : Dec 17, 2020, 1:02 PM IST

ಬಾಗೇಪಲ್ಲಿ: ತಾಲೂಕಿನಲ್ಲಿ 25 ಗ್ರಾಮ ಪಂಚಾಯತಿಗಳ 402 ಸ್ಥಾನಗಳಿಗೆ 1,038 ಮಂದಿ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದು, 22 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯತ್​ ಚುನಾವಣೆಗೆ 1,495 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 26 ತಿರಸ್ಕೃತವಾಗಿದೆ. ತಾಲೂಕಿನ 5 ಹೋಬಳಿಗಳಲ್ಲಿ 1,31,789 ಮತದಾರರಿದ್ದು, ಈ ಪೈಕಿ 65,719 ಪುರುಷರು ಮತ್ತು 66,038 ಮಹಿಳೆಯರಿದ್ದಾರೆ. ಮಿಲಿಟರಿ ಕೋಟಾದಲ್ಲಿ 34 ಮಂದಿ ಮತದಾರರಿದ್ದು, ತಾಲೂಕಿನಾದ್ಯಂತ 231 ಮತಗಟ್ಟೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.

ಇನ್ನು ಅಂತಿಮವಾಗಿ ಕಣದಲ್ಲಿರುವ 1,038 ಅಭ್ಯರ್ಥಿಗಳ ಪೈಕಿ ಅನುಸೂಚಿತ ಜಾತಿ -310, ಅನುಸೂಚಿತ ಪಂಗಡ-191, ಹಿಂದುಳಿದ ವರ್ಗ ಅ- 43, ಹಿಂದುಳಿದ ವರ್ಗ ಬಿ-5, ಸಾಮಾನ್ಯ-489 ಮಂದಿ ಇದ್ದಾರೆ. ತಾಲೂಕಿನ ಹೋಬಳಿವಾರು ಕಸಬಾ ಹೋಬಳಿಯಲ್ಲಿ 44, ಪಾತಪಾಳ್ಯ-55, ಗೂಳೂರು-51, ಚೇಳುರು-56 ಹಾಗೂ ಮಿಟ್ಟೇಮರಿ ಹೋಬಳಿಯಲ್ಲಿ 25 ಮಂದಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದರಲ್ಲಿ 22 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕಿನಲ್ಲಿ ಸೂಕ್ಷ್ಮ-173, ಅತಿಸೂಕ್ಷ್ಮ-23, ಸಾಮಾನ್ಯ-173 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ಮಸ್ಟರಿಂಗ್ ಹಾಗೂ ಚುನಾವಣಾ ಎಣಿಕೆ ಕೇಂದ್ರವನ್ನು ಮಾಡಲಾಗಿದೆ. ಚುನಾವಣಾ ಕಾರ್ಯಕ್ಕೆ 1,016 ಮಂದಿ ಸಿಬ್ಬಂದಿ ಹಾಗೂ 41 ಬಸ್‌ಗಳನ್ನು ಆಯೋಜಿಸಲಾಗಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು 3 ಎಂಸಿಸಿ ತಂಡಗಳನ್ನು ನೇಮಕ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.