ETV Bharat / state

ಹಾಸ್ಟೆಲ್​ನಲ್ಲಿ ಬೆಳಗಿನ ಉಪಹಾರ ಸೇವಿಸಿ 20 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು - ವಿದ್ಯಾರ್ಥಿಗಳು ಅಸ್ವಸ್ಥ

ಹಾಸ್ಟೆಲ್​ನಲ್ಲಿ ಬೆಳಗಿನ ಉಪಹಾರ ಇಡ್ಲಿ ಸಾಂಬರ್ ಸೇವನೆ ಮಾಡಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದಾರೆ.

ವಿದ್ಯಾರ್ಥಿಗಳು ಅಸ್ವಸ್ಥ
ವಿದ್ಯಾರ್ಥಿಗಳು ಅಸ್ವಸ್ಥ
author img

By

Published : Aug 16, 2023, 4:44 PM IST

ಚಿಕ್ಕಬಳ್ಳಾಪುರ : ಹಾಸ್ಟೆಲ್​ನಲ್ಲಿ ಬೆಳಗಿನ ಉಪಹಾರ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ‌ಕೆ ರಾಗುಟ್ಟಹಳ್ಳಿ ಬಳಿ ನಡೆದಿದೆ.

ಹಾಸ್ಟೆಲ್ ವಿದ್ಯಾರ್ಥಿಗಳಾದ ಶ್ರೀನಿವಾಸ್, ಭರತ್, ಶಶಿ ಕುಮಾರ್, ಗಗನ್, ಪ್ರಭಾಸ್, ಭವೇಶ್, ಅರವಿಂದ್, ಯಶ್ವಂತ್, ನವದೀಪ್, ಅಭಿಷೇಕ್, ರಾಜೇಶ್, ಲಕ್ಷ್ಮಿ ನಾಯಕ್, ನವೀನ್ ತೇಜ, ರಾಮ್ ಚರಣ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತಾಲೂಕಿನ ಅಂಬಾಜಿದುರ್ಗ ಹೋಬಳಿ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಕೆ.ರಾಗುಟ್ಟಹಳ್ಳಿ ಹಾಸ್ಟೆಲ್​ನಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಎಂದಿನಂತೆ ಇಂದು ಸಹಾ ಇಡ್ಲಿ ಸಾಂಬಾರ್ ಸೇವನೆ ಮಾಡಿದ್ದಾರೆ.

ಆದರೆ ತಿಂದ 10 ನಿಮಿಷಗಳ ಬಳಿಕ ವಾಂತಿ ಭೇದಿ ಶುರುವಾಗಿದ್ದು, 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇದರಿಂದ ಭಯಗೊಂಡ ಅಡುಗೆ ಸಿಬ್ಬಂದಿ ಶಿಕ್ಷಕರ ಗಮನಕ್ಕೆ ತಂದು ಕೂಡಲೇ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಘಟನೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಆದರೆ ಫುಡ್ ಪಾಯಿಜನ್ ಆಗಿರಬಹುದು ಎನ್ನಲಾಗಿದೆ. ಸದ್ಯ ಮಕ್ಕಳಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಈ ಘಟನೆಯ ವಿಷಯ ತಿಳಿದ ಕೂಡಲೆ ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಹಾಸ್ಟೆಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳು ತಿಂದಿದ್ದ ಇಡ್ಲಿ ಸಾಂಬಾರ್ ಅನ್ನು ಪರಿಶೀಲನೆ ನಡೆಸಲು ಲ್ಯಾಬ್​ಗೆ ಕಳುಹಿಸಲಾಗಿದೆ. ಚಿಂತಾಮಣಿ ಉಪ ವಿಭಾಗದ ಎಎಸ್​ಪಿ ಕುಶಲ್ ಚೌಕ್ಸೆ, ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ವಿದ್ಯಾರ್ಥಿಗಳೊಂದಿಗೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ರಾತ್ರಿ ಹಾಸ್ಟೆಲ್​ನಲ್ಲಿ ಚಿಕನ್​ ಮಾಡಿದ್ದು, ಎಲ್ಲಾರು ಊಟ ಮಾಡಿದ್ದೇವೆ. ಇವತ್ತು ಬೆಳಗ್ಗೆ ಇಡ್ಲಿ ಸಾಂಬಾರ್​ ತಿಂದ 10 ನಿಮಿಷ ಬಳಿಕ ಹಾಸ್ಟೆಲ್​ನಲ್ಲಿದ್ದವರಿಗೆ ವಾಂತಿ, ತಲೆ ಸುತ್ತು ಆರಂಭವಾಗಿದೆ. ಇದೇ ಮೊದಲು ಈ ರೀತಿ ಆಗಿರುವುದು. ಹಾಸ್ಟೆಲ್​ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವಿದ್ಯಾರ್ಥಿಯೊಬ್ಬ ತಿಳಿಸಿದ್ದಾನೆ.

ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಅಸ್ವಸ್ಥ : ಕೆಲ ದಿನಗಳ ಹಿಂದೆಯಷ್ಟೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡನವಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಚಿಕನ್ ತಿಂದು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಬಳಿಕ ಜುಲೈ 27 ರಂದು ಯಡವನಹಳ್ಳಿ ಕ್ಯಾಂಪಸ್​ನಲ್ಲಿರುವ ಗರಗನಹಳ್ಳಿ ಶಾಲೆಯಲ್ಲಿ 7 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದು ಮೊರಾರ್ಜಿ ಶಾಲೆಯ ಅವ್ಯವಸ್ಥೆ ಸರಿಯಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಬೇಗೂರು ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದರು. ಘಟನೆಯಲ್ಲಿ ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು.

ಇದನ್ನೂ ಓದಿ : ಮರುಕಳಿಸಿದ ಪ್ರಕರಣ: ಟೊಮೆಟೊ ಬಾತ್ ಸೇವಿಸಿ ಮೊರಾರ್ಜಿ ಶಾಲೆಯ 7 ವಿದ್ಯಾರ್ಥಿಗಳು ಅಸ್ವಸ್ಥ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.