ETV Bharat / state

ಕೊಳ್ಳೆಗಾಲ: ರಾತ್ರಿ ಮನೆಯಲ್ಲಿದ್ದ ಮಗಳು ಬೆಳಗ್ಗೆ ನಾಪತ್ತೆ - young woman was lost

ಕುಟುಂಬದವರೊಂದಿಗೆ ರಾತ್ರಿ ಊಟಮಾಡಿ ಜೊತೆಯಲ್ಲೆ ಮಲಗಿದ್ದ ಯುವತಿ ಬೆಳಗ್ಗೆ ಆಗುವಷ್ಟರಲ್ಲಿ ನಾಪತ್ತೆಯಾಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

kollegala
ಯುವತಿ ನಾಪತ್ತೆ
author img

By

Published : Aug 30, 2020, 9:21 PM IST

ಕೊಳ್ಳೇಗಾಲ: ಮನೆಯಲ್ಲಿದ್ದ ಮಗಳು ಇದ್ದಕ್ಕಿದಂತೆ ನಾಪತ್ತೆಯಾಗಿರುವುದಾಗಿ ಯುವತಿಯ ಅಪ್ಪ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಲ್ಲೂಕಿನ ಅರೇಪಾಳ್ಯ ಗ್ರಾಮದ ಗಂಗಾಧರ್ ಎಂಬಾವರ ಮಗಳು ರಶ್ಮಿ (20) ಕಾಣೆಯಾದ ಯುವತಿ. ಆ.29 ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದು ಇಂದು ಬೆಳಿಗ್ಗೆ ಎದ್ದು ನೋಡಿದಾಗ ಕಾಣೆಯಾಗಿದ್ದಳು. ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ಎಲ್ಲೂ ಸಿಗದೆ ಇರುವುದರಿಂದ ಆಕೆಯನ್ನು ಪತ್ತೆ ಮಾಡಿಕೊಡುವಂತೆ ಗಂಗಾಧರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಯುವತಿಯ ಚಹರೆ :

ರಶ್ಮಿ 20 ವರ್ಷ, ಕೋಲು ಮುಖ, ಸುಮಾರು 5.6 ಅಡಿ, ನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಯುವತಿಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.