ETV Bharat / state

ಮೀನು ಹಿಡಿಯಲು ಹೋಗಿದ್ದ ಸ್ನೇಹಿತರು: ದೋಣಿ‌ ಮಗುಚಿ ಯುವಕ ನಾಪತ್ತೆ - kollegala latest news

ವರುಣ್ ಮತ್ತು ರವಿ ಎಂಬವರು ಶಿವನಸಮುದ್ರ ಮಾರಮ್ಮನ ದೇವಾಲಯದ ಹಿಂದೆ ಹರಿಯುವ ಕಾವೇರಿ ನದಿಗೆ ಮೀನು ಹಿಡಿಯಲೆಂದು ತೆರಳಿದ್ದರು. ಈ ಸಂದರ್ಭದಲ್ಲಿ ದೋಣಿ ಮಗುಚಿದೆ.

young man lost in river near shivana samudra of kollegala
ದೋಣಿ‌ ಮಗುಚಿ ಯುವಕ ವರುಣ್ ನಾಪತ್ತೆ
author img

By

Published : Oct 27, 2021, 7:16 AM IST

ಕೊಳ್ಳೇಗಾಲ: ಮೀನು ಹಿಡಿಯಲೆಂದು ಗೆಳೆಯರಿಬ್ಬರು ತೆರಳಿದ್ದು, ಈ ವೇಳೆ ದೋಣಿ ಮುಳುಗಿ ಓರ್ವ ಯುವಕ ನಾಪತ್ತೆಯಾದ ಘಟನೆ ಶಿವನ ಸಮುದ್ರದ ಬಳಿ ನಡೆದಿದೆ. ಸತ್ತೇಗಾಲ ಸಮೀಪದ ಶಿವನ ಸಮುದ್ರ ಗ್ರಾಮದ ಶಾಂತರಾಜು ಎಂಬುವವರ ಪುತ್ರ ವರುಣ್ (21) ನಾಪತ್ತೆಯಾಗಿದ್ದಾನೆ.

ವರುಣ್​ ಅದೇ ಗ್ರಾಮದ ತನ್ನ ಸ್ನೇಹಿತ ರವಿ ಜೊತೆ ಅಕ್ಟೋಬರ್‌ 25ರಂದು ಶಿವನಸಮುದ್ರ ಮಾರಮ್ಮನ ದೇವಾಲಯದ ಹಿಂದೆ ಹರಿಯುವ ಕಾವೇರಿ ನದಿಗೆ ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ದೋಣೆ ಮಗುಚಿ ಸ್ನೇಹಿತರಿಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಇಬ್ಬರೂ ಈಜಲು ಮುಂದಾಗಿದ್ದಾರೆ. ಆದ್ರೆ ವರುಣ್ ಈಜಲಾಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ನೇಹಿತ ರವಿ ನೀರಿನಲ್ಲಿ ಈಜಿ ದಡ ಸೇರಿದ್ದಾನೆ.

ಬದುಕುಳಿದ ರವಿ ಘಟನೆಯ ಬಗ್ಗೆ ಊರಿನವರಿಗೆ ತಡವಾಗಿ ತಿಳಿಸಿದ್ದು,‌ ವರುಣ್ ಪೋಷಕರು ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಪಿಎಸ್ಐ ವಿ.ಸಿ.ಅಶೋಕ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಾಪತ್ತೆಯಾದ ಯುವಕನ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ. ರವಿಯನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಆಟೋ ಚಾಲಕನ ಸಮಯ ಪ್ರಜ್ಞೆ,ಮಾನವೀಯತೆ: ಪೋಷಕರ ಮಡಿಲು ಸೇರಿದ ಮಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.