ETV Bharat / state

ಫುಡ್ ಕಿಟ್​ಗಾಗಿ ಮುಗಿಬಿದ್ದ ಕಾರ್ಮಿಕರು : ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರು - ಕೊಳ್ಳೇಗಾಲದ ಆರ್.ಎಂ.ಸಿ ಮಾರುಕಟ್ಟೆ

ಪರಿಸ್ಥಿತಿ ಹತೋಟಿಗೆ ಬಾರದ ಕಾರಣ ಪೊಲೀಸರು ಸಾಲಾಗಿ ನಿಲ್ಲುವಂತೆ ಲಾಠಿ ಬೀಸಿದರು. ಬಳಿಕ ಮುಗಿ ಬೀಳುತ್ತಿದ್ದ ಕಾರ್ಮಿಕರು ಚದುರಿದರು. ಪುನಾಃ ಕಿಟ್ ವಿತರಣೆ ಕಾರ್ಯ ನಡೆಯಲು ಅನುವು ಮಾಡಿಕೊಟ್ಟರು..

workers rushed for  food kit
ಫುಡ್ ಕಿಟ್​ಗಾಗಿ ಮುಗಿಬಿದ್ದ ಕಾರ್ಮಿಕರು
author img

By

Published : Jul 9, 2021, 2:32 PM IST

ಕೊಳ್ಳೇಗಾಲ : ಕಾರ್ಮಿಕ ಇಲಾಖೆ ವತಿಯಿಂದ ನೋಂದಾಯಿತ ಕಾರ್ಮಿಕ ವರ್ಗಕ್ಕೆ ಆರ್‌ಎಂಸಿ ಆವರಣದಲ್ಲಿ ಏರ್ಪಡಿಸಿದ್ದ ಆಹಾರ ಕಿಟ್ ವಿತರಣೆ ವೇಳೆ ನೂಕುನುಗ್ಗಲು ಏರ್ಪಟ್ಟು, ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದ ಘಟನೆ ಜರುಗಿದೆ.

ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರು..

ನಗರದ ಆರ್‌ಎಂಸಿ ಮಾರುಕಟ್ಟೆ ಕಚೇರಿಯಲ್ಲಿ ಶಾಸಕ ಎನ್.ಮಹೇಶ್ ಕಿಟ್ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಉಳಿದ ಕಾರ್ಮಿಕರಿಗೆ ಗೋಡೌನ್​ನಲ್ಲಿ ಕಿಟ್ ವಿತರಿಸಲು ಕಾರ್ಮಿಕ ಇಲಾಖೆ ಮುಂದಾದಾಗ ಕಿಟ್​ಗಾಗಿ ಕಾರ್ಮಿಕರು ಒಬ್ಬರ ಮೇಲೊಬ್ಬರು ಮುಗಿಬಿದ್ದರು.

ಕಿಟ್ ಸಿಗತ್ತದೆಯೋ ಇಲ್ಲವೋ ಎಂಬ ಗೊಂದಲ ಏರ್ಪಟ್ಟು ವಿತರಣೆ ಸ್ಥಳಕ್ಕೆ ನುಗ್ಗಲು ಆರಂಭಿಸಿದರು. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಗೋಡೌನ್ ಮುಚ್ಚಿಸಿ ಸಾಲು ನಿಲ್ಲಿಸಲು ಹರಸಹಾಸ ಪಟ್ಟರು. ಪರಿಸ್ಥಿತಿ ಹತೋಟಿಗೆ ಬಾರದ ಕಾರಣ ಪೊಲೀಸರು ಸಾಲಾಗಿ ನಿಲ್ಲುವಂತೆ ಲಾಠಿ ಬೀಸಿದರು. ಬಳಿಕ ಮುಗಿ ಬೀಳುತ್ತಿದ್ದ ಕಾರ್ಮಿಕರು ಚದುರಿದರು. ಪುನಾಃ ಕಿಟ್ ವಿತರಣೆ ಕಾರ್ಯ ನಡೆಯಲು ಅನುವು ಮಾಡಿಕೊಟ್ಟರು.

ಬಿಸಿಲಿನಲ್ಲಿಯೇ ನಿಂತ ಕಾರ್ಮಿಕರು: ಕಾರ್ಮಿಕ ಇಲಾಖೆ ಕಿಟ್ ವಿತರಣೆಗೆ ಪೂರಕ ವ್ಯವಸ್ಥೆ ಮಾಡದೇ ಕಾರ್ಮಿಕರು ಬಿಸಿಲಲ್ಲಿಯೇ ಆಹಾರ ಕಿಟ್ ಪಡೆಯಬೇಕಾದ ಪರಿಸ್ಥಿತಿ ಎದುರಾಯಿತು. ಸೂಕ್ತ ವ್ಯವಸ್ಥೆ ಇಲ್ಲದೆ ಕಾರ್ಮಿಕರನ್ನು ಸಾಲಾಗಿ ನಿಲ್ಲಿಸಲು ಪೊಲೀಸರು ಪರದಾಡುವ ಪರಿಸ್ಥಿತಿ ಉಂಟಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.