ETV Bharat / state

ಚಾಮರಾಜನಗರ: ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ, ಇಬ್ಬರು ಮಕ್ಕಳ ಶವ ಪತ್ತೆ - kids found hanging at home in Chamarajanagar

Chamarajanagar crime: ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಪತಿ ಹಾಗೂ ಆತನ ಕುಟುಂಸ್ಥರು ಕೃತ್ಯ ಎಸಗಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ
author img

By ETV Bharat Karnataka Team

Published : Sep 15, 2023, 8:49 AM IST

Updated : Sep 15, 2023, 10:14 AM IST

ಚಾಮರಾಜನಗರ: ಮಹಿಳೆ ಹಾಗೂ ಇಬ್ಬರು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೇಘಾ (24) ಮತ್ತು ಮಕ್ಕಳಾದ ಪುನ್ವಿತಾ (06) ಹಾಗೂ ಮನ್ವಿತಾ (03) ಮೃತರು.

ಪತಿ, ಅತ್ತೆ-ಮಾವ ವಿರುದ್ಧ ಕೊಲೆ ಆರೋಪ: ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು. ನಿನ್ನೆ(ಗುರುವಾರ) ಬೆಳಿಗ್ಗೆಯಿಂದಲೂ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಮೇಘಾ ಪತಿ ಅಭಿ ಅಲಿಯಾಸ್​ ಧನಂಜಯ, ಈತನ ತಾಯಿ ನಿರ್ಮಲಮ್ಮ ಹಗೂ ತಂದೆ ಮಲ್ಲಿಕಾರ್ಜುನ ಮತ್ತು ತಮ್ಮ ಪುಟ್ಟು ಜತೆ ಸೇರಿ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತ ಮೇಘಾಳ ತಂದೆ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪತಿ ಅಭಿ ಹಾಗೂ ಆತನ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Assam crime: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಶವ ಪತ್ತೆ: ಅತ್ಯಾಚಾರ ಶಂಕೆ

Last Updated : Sep 15, 2023, 10:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.