ETV Bharat / state

ಆಸ್ಪತ್ರೆ ತಲುಪುವ ಮುನ್ನ ಆ್ಯಂಬುಲೆನ್ಸ್​​ನಲ್ಲೇ ಹೆರಿಗೆ: ನಾಲ್ಕು ದಿನದಲ್ಲಿ ಮೂರನೇ ಘಟನೆ - ಹನೂರು ತಾಲೂಕಿನಲ್ಲಿ ಆ್ಯಂಬುಲೆನ್ಸ್​ನಲ್ಲೇ ಹೆರಿಗೆ

ಚಾಮರಾಜನಗರದ ಹನೂರು ತಾಲೂಕಿನಲ್ಲಿ ಆಸ್ಪತ್ರೆ ತಲುಪುವ ಮುನ್ನವೇ ಮಹಿಳೆಯೊಬ್ಬರು ಆ್ಯಂಬುಲೆನ್ಸ್​​ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದ್ದು, ನಾಲ್ಕು ದಿನಗಳಲ್ಲಿ ಇದು ಮೂರನೇ ಪ್ರಕರಣವಾಗಿದೆ.

woman gives birth to baby in ambulance
ಆಸ್ಪತ್ರೆ ತಲುಪುವ ಮುನ್ನವೇ ಆ್ಯಂಬುಲೆನ್ಸ್​​ನಲ್ಲೇ ಹೆರಿಗೆ: ನಾಲ್ಕು ದಿನದಲ್ಲಿ ಮೂರನೇ ಘಟನೆ
author img

By

Published : Dec 15, 2021, 12:23 PM IST

ಚಾಮರಾಜನಗರ: ಆಸ್ಪತ್ರೆ ತಲುಪುವ ಮುನ್ನವೇ ಮಹಿಳೆಯೊಬ್ಬರು ಆ್ಯಂಬುಲೆನ್ಸ್​​ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಹನೂರು ತಾಲೂಕಿನ ಭದ್ರೇನಹಳ್ಳಿ ರಸ್ತೆಯಲ್ಲಿ ನಡೆದಿದೆ. ಹನೂರು ತಾಲೂಕಿನ ಅರಬಗೆರೆ ಗ್ರಾಮದ ಕೃಷ್ಣ ಎಂಬುವರ ಪತ್ನಿ ಚಂದ್ರಮ್ಮ ಗಂಡು ಮಗುವಿಗೆ ಮಂಗಳವಾರ ರಾತ್ರಿ ಜನ್ಮ ನೀಡಿದ್ದಾರೆ.

ಕೌದಳ್ಳಿ ಗ್ರಾಮದ ಸಿಸ್ಟರ್ ಸುಮತಿ ಆಸ್ಪತ್ರೆಗೆ ಕರೆದೊಯ್ಯುವಾಗ ಹೆರಿಗೆ ನೋವು ಹೆಚ್ಚಾಗಿ ಆ್ಯಂಬುಲೆನ್ಸ್​​ನಲ್ಲೇ ಚಂದ್ರಮ್ಮ ಮಗುವಿಗೆ ಜನ್ಮ ನೀಡಿದ್ದು ತಾಯಿ-ಮಗು ಆರೋಗ್ಯವಾಗಿದ್ದಾರೆಂದು ಆ್ಯಂಬುಲೆನ್ಸ್ ಚಾಲಕ ಲಿಂಗರಾಜು ಹಾಗೂ ಆರೋಗ್ಯ ಸಿಬ್ಬಂದಿ ನಾಗರಾಜು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆ ತಲುಪುವ ಮುನ್ನವೇ ಆ್ಯಂಬುಲೆನ್ಸ್​​ನಲ್ಲೇ ಹೆರಿಗೆ: ನಾಲ್ಕು ದಿನದಲ್ಲಿ ಮೂರನೇ ಘಟನೆ
ಆಸ್ಪತ್ರೆಯಲ್ಲಿ ತಾಯಿ, ಮಗು

ಹನೂರು ತಾಲೂಕಿನಲ್ಲಿ ಕಳೆದ 4 ದಿನಗಳಲ್ಲಿ ಮೂರು ಹೆರಿಗೆಗಳು ಆ್ಯಂಬುಲೆನ್ಸ್​ನಲ್ಲೇ ನಡೆದಿದ್ದು, ಎಲ್ಲಾ ಪ್ರಕರಣಗಳಲ್ಲೂ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಮೂರು ಪ್ರಕರಣಗಳಲ್ಲಿ ಎರಡು ಪ್ರಕರಣ ಕೌದಳ್ಳಿ ಭಾಗಕ್ಕೆ ಸೇರಿವೆ.

ಇದನ್ನೂ ಓದಿ: ಬಾಗಲಕೋಟೆ: ಕಬ್ಬಿನ ಲಾರಿಯಲ್ಲೇ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.