ETV Bharat / state

14ನೇ ವಯಸ್ಸಿಗೇ ಸ್ವಾತಂತ್ರ್ಯದ ಕಿಚ್ಚು, ಸೆರೆಮನೆ ವಾಸ.. ಪೊಲೀಸ್​ ಲಾಠಿ ಕಿತ್ತು ಬಿಸಾಡಿದ್ದರು ಈ ಧೀರೆ - woman freedom fighter Lalitha Tagett life stroy

89 ರ ವೃದ್ಧೆ ಲಲಿತಾ ಟಾಗೆಟ್ ಅವರು ತಮ್ಮ 14 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯದ ಘೋಷಣೆಗಳಿಂದ ಸ್ಪೂರ್ತಿಗೊಂಡು ಚಳವಳಿಗೆ ಧುಮುಕಿದ್ದರಂತೆ. ಅವರನ್ನು ಪೊಲೀಸರು ಬಂಧಿಸಿ ಮೈಸೂರಿನ ಜೈಲಿನಲ್ಲಿ ಸುಮಾರು ಒಂದು ತಿಂಗಳು ಇರಿಸಿದ್ದರು ಎಂದು 'ಈಟಿವಿ ಭಾರತ'ದೊಂದಿಗೆ ತಮ್ಮ ಹೋರಾಟದ ದಿನಗಳ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

alitha Tagett
ಲಲಿತಾ ಟಾಗೆಟ್
author img

By

Published : Aug 15, 2021, 7:36 AM IST

ಚಾಮರಾಜನಗರ: ಜಿಲ್ಲೆಯ ಗಂಗಾಮತಸ್ಥರ ಬೀದಿಯಲ್ಲಿ ವಾಸಿಸುತ್ತಿರುವ ಲಲಿತಾ ಟಾಗೆಟ್ ಎಂಬ ಹಿರಿಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಈಗಲೂ ಯುವಜನತೆಗೆ ಸ್ಪೂರ್ತಿಯ‌ ಚಿಲುಮೆಯಾಗಿದ್ದಾರೆ. ಅಂದು ಅವರು ಮಾಡಿದ ಹೋರಾಟ, ತೋರಿದ್ದ ಧೈರ್ಯವನ್ನು ಈಗಲೂ ನೆನಪಿಸಿಕೊಂಡು ನಸುನಗುತ್ತಾರೆ.

ಲಲಿತಾ ಟಾಗೆಟ್ (89 ರ ವೃದ್ಧೆ) ಅವರು ತಮ್ಮ 14 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯದ ಘೋಷಣೆಗಳಿಂದ ಸ್ಪೂರ್ತಿಗೊಂಡು ಚಳವಳಿಗೆ ಧುಮುಕಿದ್ದರು.‌ ಕುಟುಂಬಸ್ಥರ ಮಾತು ಕೇಳದೆ ಬ್ರಿಟಿಷರ ವಿರುದ್ಧದ ಮೆರವಣಿಗೆಗಳಲ್ಲಿ ಭಾಗವಹಿಸಿ, ಘೋಷಣೆಗಳನ್ನು ಕೂಗಿ ಗಮನ ಸೆಳೆದಿದ್ದರು.

ತಮ್ಮ ಹೋರಾಟದ ಸಂಗತಿಗಳನ್ನು ಮೆಲುಕು ಹಾಕಿದ ಲಲಿತಾ ಟಾಗೆಟ್

1947 ರ ಆಗಸ್ಟ್ ತಿಂಗಳಿನಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಟಾಗೆಟ್ ಅವರನ್ನು ಪೊಲೀಸರು ಬಂಧಿಸಿ ಮೈಸೂರಿನ ಜೈಲಿನಲ್ಲಿ ಸುಮಾರು ಒಂದು ತಿಂಗಳು ಇರಿಸಿದ್ದರು. ಈ ವೇಳೆ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಮುಖಂಡರು ಹೇಳಿಕೊಟ್ಟಂತೆ ಸೆರೆಮನೆಯಲ್ಲಿ "ತನಗೆ ತುಪ್ಪ ಬೇಕು, ಮೊಸರು ಬೇಕು, ಚಟ್ನಿಪುಡಿ ಇಲ್ಲದೆ ಊಟ ಮಾಡುವುದಿಲ್ಲ" ಎಂದು ರಂಪಾಟ ಮಾಡಿ ಊಟ ಬಿಟ್ಟು ಜೈಲು ಸಿಬ್ಬಂದಿ ನಿದ್ದೆಗೆಡಿಸಿದ್ದರಂತೆ‌‌‌. ನಂತರ ಸೆರೆಮನೆಯಿಂದ ವಾಪಸ್​ ಆದ ಬಳಿಕ "ಮೈಸೂರು ಚಲೋ" ಹೋರಾಟಕ್ಕೆ ಭಾಗವಹಿಸಿ 14 ನೇ ವಯಸ್ಸಿನಲ್ಲೇ ಹೋರಾಟದ ಕಿಚ್ಚನ್ನು ತೋರಿದ್ದರು.

ಪೊಲೀಸರಿಂದ ಲಾಠಿ ಕಿತ್ತು ಬಿಸಾಡಿದ್ದ ದಿಟ್ಟೆ‌‌: ಪ್ರತಿಭಟನೆ, ಮೆರವಣಿಗೆಗಳಲ್ಲಿ ಮುಂದಿರುತ್ತಿದ್ದ ಟಾಗೆಟ್ ಅವರು ಕೆಲವೊಮ್ಮೆ ಪೊಲೀಸರ ಲಾಠಿಗಳನ್ನು ಕಿತ್ತುಕೊಂಡು ಬಿಸಾಡುತ್ತಿದ್ದರಂತೆ. ಪೊಲೀಸ್ ಠಾಣೆಗಳ ಬಳಿ ತೆರಳಿ ಅಲ್ಲಿನ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪರಾರಿಯಾಗುತ್ತಿದ್ದರಂತೆ. ತನ್ನ ತಾಯಿ ಮನೆಯಲ್ಲಿ ಕೂಡಿ ಹಾಕಿದ್ರು ಕೂಡ ಛಾವಣಿ ಹೆಂಚು ಇಳಿಸಿ ಹೊರಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗುವುದು ಸಾಮಾನ್ಯವಾಗಿತ್ತು ಎಂದು ಲಲಿತಾ ಟಾಗೆಟ್ ಹಳೆಯ ನೆನಪುಗಳನ್ನು ಮೆಲುಕುಹಾಕಿದ್ದಾರೆ.

"ಆಗ ನನಗೆ ಬಹಳ ಧೈರ್ಯ, ಈ ದೇಶ ನನ್ನದು, ಈ ಊರು ನಮ್ಮದು, ಆಕಾಶವೂ ನಮ್ಮದು, ಭೂಮಿ ನನ್ನದೇ ಎಂದು ಘೋಷಣೆ ಕೂಗುತ್ತಿದ್ದೆ. ಚಿಕ್ಕ ವಯಸ್ಸಾಗಿದ್ದರಿಂದ ಪೊಲೀಸರು ಹೊಡೆಯುತ್ತಿರಲಿಲ್ಲ. ಆದ್ದರಿಂದ ನಾನು ರಂಪಾಟ ಮಾಡುತ್ತಿದ್ದೆ. ಈಗ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಮನಸ್ಸಿಗೆ ಖುಷಿ ಕೊಡುತ್ತದೆ ಎಂದು 'ಈಟಿವಿ ಭಾರತ'ದೊಂದಿಗೆ ತಮ್ಮ ಹೋರಾಟದ ಸಂಗತಿಗಳನ್ನು ಮೆಲುಕು ಹಾಕಿದರು.

ನಿವೃತ್ತ ಶಿಕ್ಷಕನಿಂದ ಸನ್ಮಾನ: ನಿವೃತ್ತ ಶಿಕ್ಷಕ ರಾಜೇಂದ್ರ ಅವರು ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಲಲಿತಾ ಟಾಗೆಟ್ ಅವರ ಮನೆಗೆ ತೆರಳಿ ಶಾಲು, ಹಾರ ಮತ್ತು ಫಲಗಳನ್ನು ನೀಡಿ ಸನ್ಮಾನಿಸಿ ಅವರಿಂದ ಆಶೀರ್ವಾದ ಪಡೆದರು.

ಒಟ್ಟಿನಲ್ಲಿ ಅಪ್ರತಿಮ ದೇಶಪ್ರೇಮ ತೋರುವ ಈ ಹೋರಾಟಗಾರ್ತಿಯ ಬದುಕು ಇಂದಿನ ಯುವ ಜನತೆಗೆ ಮಾದರಿಯಾದ್ರೆ ಇವರ ಮಾತುಗಳು ಸ್ಫೂರ್ತಿದಾಯಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.