ಚಾಮರಾಜನಗರ: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮನೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹನೂರು ಸಮೀಪದ ಬಂಡಳ್ಳಿಯಲ್ಲಿ ನಡೆದಿದೆ.
ಜಿಲ್ಲೆಯ ಬಂಡಳ್ಳಿ ಗ್ರಾಮದ ನಂಜಪ್ಪಚಾರಿ ಪತ್ನಿ ರತ್ನಮ್ಮ ಮೃತಪಟ್ಟ ಮಹಿಳೆ. ಶುಕ್ರವಾರ ಸುರಿದ ಮಳೆಗೆ ಮಣ್ಣಿನ ಗೋಡೆ ಕುಸಿದು ಬಿದ್ದ ಪರಿಣಾಮ ರತ್ನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹಳೆಯ ಮನೆ ಸಮೀಪವೇ ಹೊಸ ಮನೆಯೊಂದನ್ನು ಇವರು ಕಟ್ಟುತ್ತಿದ್ದರು ಎಂದು ತಿಳಿದುಬಂದಿದೆ. ಹೊಸಮನೆ ನಿರ್ಮಾಣಕ್ಕೂ ಮುನ್ನವೇ ವಿಧಿಯಾಟಕ್ಕೆ ರತ್ನಮ್ಮ ಬಲಿಯಾಗಿದ್ದಾರೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.