ETV Bharat / state

ಡಬಲ್ ಇಂಜಿನ್ ಸರ್ಕಾರದ ಮುಂದೆ ಯಾವುದೂ ನಡೆಯಲ್ಲ: ಬಿ ವೈ ವಿಜಯೇಂದ್ರ - Surapura MLA Rajugowda

ಗುಂಡ್ಲುಪೇಟೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಸಮಾವೇಶ ಅದ್ಧೂರಿಯಾಗಿ ನಡೆಯಿತು‌.

Youth convention
ಯುವ ಸಮಾವೇಶ
author img

By

Published : Mar 24, 2023, 8:35 PM IST

ಬಿ ವೈ ವಿಜಯೇಂದ್ರ ಭಾಷಣ

ಚಾಮರಾಜನಗರ: ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವ ಸಮಾವೇಶ ಅದ್ಧೂರಿಯಾಗಿ ನಡೆಯಿತು‌. ಬೇಗೂರಿನಿಂದ ಗುಂಡ್ಲುಪೇಟೆಗೆ ಬೈಕ್ ರ್ಯಾಲಿ ನಡೆಸಿದ ಕಾರ್ಯಕರ್ತರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಭರ್ಜರಿ ಸ್ವಾಗತ ಕೋರಿದರು. ಕಾರ್ಯಕ್ರಮ ಉದ್ಘಾಟಿಸಿ ಬಿಜೆಪಿ ಯುವ ನಾಯಕ ಬಿ.ವೈ.ವಿಜಯೇಂದ್ರ ಮಾತನಾಡಿದರು. ಇಲ್ಲಿನ ಬಿಜೆಪಿ ಕಾರ್ಯಕಯರ್ತರನ್ನು ನೋಡಿದರೆ ನಾನೇಕೆ ಗುಂಡ್ಲುಪೇಟೆ ಕ್ಷೇತ್ರದಲ್ಲೇ ಬಂದು ಚುನಾವಣೆಯಲ್ಲಿ ನಿಲ್ಲಬಾರದು ಎಂದು ನನಗೆ ಹೊಟ್ಟೆ ಹುರಿಯುತ್ತದೆ. ರಣೋತ್ಸಾಹ ಬರುವ ರೀತಿಯಲ್ಲಿ ಜನ ಸೇರಿದ್ದೀರಿ ಎಂದು ಕಾರ್ಯಕರ್ತರನ್ನು ಹುರಿದುಂಂಬಿಸಿದರು.

ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಘವೇಂದ್ರ ಮತ್ತು ವಿಜಯೇಂದ್ರ ಒಂದು ಕಣ್ಣಾದರೆ, ಶಾಸಕ ಸಿ.ಎಸ್.ನಿರಂಜನಕುಮಾರ್ ಮತ್ತೊಂದು ಕಣ್ಣು. ಆದ್ದರಿಂದ 50 ಸಾವಿರ ಮತಗಳ ಅಂತರದಿಂದ ನಿರಂಜನಕುಮಾರ್ ಗೆದ್ದು ಬಂದರೆ ಯಡಿಯೂರಪ್ಪ ಅವರನ್ನೇ ಗೆಲ್ಲಿಸಿದಂತೆ. ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವ ರೀತಿ ನೋಡಿದರೆ ನಮಗೆ ನಾಚಿಕೆ ಆಗುತ್ತದೆ ಎಂದು ಅಮಿತ್ ಶಾ ಹೇಳುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ 140 ಸೀಟ್ ಗೆಲ್ಲಿಸಿ ಅಧಿಕಾರಕ್ಕೆ ಹಿಡಿಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್​ ಪಕ್ಷ ಗ್ಯಾರಂಟಿ ಕಾರ್ಡ್ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದೆ. ದೇಶದಲ್ಲಿ ಈಗಾಗಲೇ ಜನರು ಕಾಂಗ್ರೆಸ್ ಕಿತ್ತು ಬಿಸಾಕುತಿದ್ದಾರೆ. ಆದರೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದು ಗ್ಯಾರಂಟಿ ಕಾರ್ಡ್ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜೆಡಿಎಸ್ ಅತಂತ್ರದ ಮೂಲಕ ಅಧಿಕಾರ ಹಿಡಿಯಬೇಕು ಎಂದು ಕಾದು ಕುಳಿತಿದೆ. ಆದರೆ ಡಬಲ್ ಇಂಜಿನ್ ಸರ್ಕಾರದ ಮುಂದೆ ಯಾವುದು ನಡೆಯುವುದಿಲ್ಲ. ಚಾಮರಾಜನಗರದ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರ ಹಿಡಿಯಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿ.ವೈ ವಿಜಯೇಂದ್ರ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಮುಖಂಡರೇ ಖೆಡ್ಡಾ ತೋಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬಾರದು ಎಂದು ಒಳಗೊಳಗೆ ಬೇಗುದಿ ಬೇಯ್ಯುತ್ತಿದೆ. ಒಬ್ಬರನ್ನು ಕಂಡರೇ ಮತ್ತೊಬ್ಬರಿಗೆ ಆಗದ ಪರಿಸ್ಥಿತಿ ಕಾಂಗ್ರೆಸ್​​ನಲ್ಲಿದ್ದು, ಇದು ಬಿಜೆಪಿಗೆ ವರದಾನವಾಗಲಿ ಎಂದು ತಿಳಿಸಿದರು.

ಇದಕ್ಕೂ ಮೊದಲು ಕಾರ್ಯಕ್ರಮದ ಆರಂಭದಲ್ಲಿ ಸುರಪುರ ಶಾಸಕ ರಾಜುಗೌಡ ಮಾತನಾಡಿ, ಯಡಿಯೂರಪ್ಪ ರಾಜಾಹುಲಿ ಆದರೆ ವಿಜಯೇಂದ್ರ ಮರಿ ಹುಲಿ ಅಲ್ಲ , ವಿಜಯೇಂದ್ರ ಹೆಬ್ಬುಲಿ ಇದ್ದಂತೆ. ರಾಜ್ಯ ರಾಜಕಾರಣದಲ್ಲಿ ವಿಜಯೇಂದ್ರ ಹೊಸ ಬದಲಾವಣೆ ತರುತ್ತಿದ್ದಾರೆ ಎಂದರು.

ರಾಗಾ ವಿರುದ್ಧ ಶಾಸಕ ಮಹೇಶ್ ಆಕ್ರೋಶ : ಬಿಜೆಪಿ ಕೇವಲ ಲಿಂಗಾಯತರ ಪಕ್ಷ ಎನ್ನುತ್ತಿದ್ದರು. ಆದರೆ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಹೆಚ್ಚಳ ಮಾಡುವ ಮೂಲಕ ದೀನ ದಲಿತರು, ಹಿಂದುಳಿದ ವರ್ಗದವರ ಪರ ನಿಂತಿದೆ. ಆದ್ದರಿಂದ ನಾಯಕ ಸಮುದಾಯ ನರೇಂದ್ರ ಮೋದಿ, ಯಡಿಯೂರಪ್ಪ ಸರ್ಕಾರವನ್ನು ಜೀವನ ಇರೋವರೆಗೂ ಮರೆಯಬಾರದು. ಇದನ್ನು ಯುವಕರು, ಮನೆ ಮನೆಗೆ ಹೋಗಿ ತಿಳಿ ಹೇಳಬೇಕು. ಸರಳ, ಸಜ್ಜನಿಕೆಯ ರಾಜಕಾರಣಿ ಶಾಸಕ ನಿರಂಜನಕುಮಾರ್ ವಿನಯದಿಂದ ಅನುದಾನ ತಂದಿದ್ದಾರೆ. ಗುಂಡ್ಲುಪೇಟೆಯಲ್ಲಿ ಕಳೆದ ಬಾರಿ ಬಿಎಸ್‍ವೈ ಬಿಜೆಪಿ ಅಧಿಕಾರಕ್ಕೆ ತಂದಿದ್ದು, ಅದನ್ನು ಹೆಮ್ಮರವಾಗಿ ಬೆಳೆಸಬೇಕು. ನಾಲ್ಕು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಬೇಕು ಎಂದು ಶಾಸಕ ಮಹೇಶ್ ಮನವಿ ಮಾಡಿದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬ್ರಿಟಿಷರ ನಾಡಿಗೆ ಹೋದಾಗ ರಾಹುಲ್ ಗಾಂಧಿ ಹೇಳಿದ್ದಾರೆ. ಇದು ದೇಶಕ್ಕೆ ದೇಶಕ್ಕೆ ಮಾಡಿದ ಅಪಮಾನವಾಗಿದೆ. ಬಿಜೆಪಿ ಆಡಳಿದ ಅವಧಿಯಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಜೀವಂತವಾಗಿದೆ. ಇಂದು ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ನಿರಂಜನಕುಮಾರ್ ಮಾರ್ಕ್ ಕಾರ್ಡ್ ಇಟ್ಟುಕೊಂಡು ನಿಮ್ಮ ಬಳಿ ಬರುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಇಟ್ಟು ಕೊಂಡು ಬರುತ್ತಿದ್ದು, ಅದು ಬೋಗಸ್ ಆಗುತ್ತದೆ. ಆದ್ದರಿಂದ ಈ ಬಾರಿ 2 ಲಕ್ಷದ 20 ಸಾವಿರ ಮತಗಳನ್ನು ನೀಡುವ ಮೂಲಕ ರ್ಯಾಂಕ್​​ನಲ್ಲಿ ಗೆಲ್ಲಿಸಬೇಕು ಎಂದು ಎನ್​ ಮಹೇಶ್​ ಕೋರಿದರು.

ಇದನ್ನೂ ಓದಿ :ಚಾಮರಾಜನಗರ ಚುನಾವಣಾ ಉಸ್ತುವಾರಿ ಬಿ ವೈ ವಿಜಯೇಂದ್ರಗೆ ಕೊಡಿ.. ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.