ಚಾಮರಾಜನಗರ: ಮೂರು-ಮೂರು ತಿಂಗಳಿಗೂ ಸಿಎಂ ಬದಲು (cm position exchange) ಮಾಡುವುದಕ್ಕೆ ಇದೇನು ದನದ ದೊಡ್ಡಿಯಲ್ಲ. ಪ್ರಜಾಪ್ರಭುತ್ವ ಆಧಾರದಲ್ಲಿ ಸರ್ಕಾರ ರಚನೆಯಾಗಿದೆ. ಸಿಎಂ ಸ್ಥಾನಕ್ಕೆ ಅತ್ಯಂತ ಸೌಜನ್ಯ, ಗಾಂಭಿರ್ಯ ಮತ್ತು ಶಕ್ತಿಯನ್ನು ಬೊಮ್ಮಾಯಿ ತುಂಬಿದ್ದಾರೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹಿಂದಿನ ಸಿಎಂಗೆ ಹೋಲಿಸಿದರೆ ಬಸವರಾಜ ಬೊಮ್ಮಾಯಿ ಪ್ರಾಜ್ಞರಿದ್ದಾರೆ. ಅವರ ಮಾತಿನಲ್ಲಿ ದುಡುಕಿಲ್ಲ. ತಾನು ಸಿಎಂ ಆಗಿಲ್ಲವೇನೋ ಎಂಬಂತೆ ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಸಿಎಂ ಬದಲಾಗುತ್ತಾರೆ ಎಂಬ ಕೈ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಬದಲಾವಣೆಯಿಂದ ಯಾವುದೇ ಪ್ರಯೋಜನವಿಲ್ಲ. ಬೊಮ್ಮಾಯಿ ಬಿಟ್ಟರೇ ಇನ್ಯಾರಿದ್ದಾರೆ ಎಂದು ಪ್ರಶ್ನಿಸಿದರು. ಹಿಂದಿನ ಸಿಎಂ ರೀತಿಯಲ್ಲ ಬೊಮ್ಮಾಯಿ ಎಂದು ಗುಣಗಾನ ಮಾಡಿದರು.
ಕ್ರಿಪ್ಟೋ ಕರೆನ್ಸಿ ಭಾರತದಲ್ಲಿ ಅಗೋಚರವಾದ ದಂಧೆಯಾಗಿದೆ. ರಾಜ್ಯದ ಬಿಟ್ ಕಾಯಿನ್ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ಓದಿ: ಬಿಟ್ಕಾಯಿನ್ ಪ್ರಕರಣದಲ್ಲಿ ಇರುವವರ ಹೆಸರು ಸರ್ಕಾರಕ್ಕೆ ಗೊತ್ತಾಗಬೇಕು, ಆಗಲ್ಲ ಅಂದ್ರೆ ಅಧಿಕಾರ ಬಿಡಲಿ: ಸಿದ್ದರಾಮಯ್ಯ