ಚಾಮರಾಜನಗರ: ಜಿಲ್ಲೆಯಲ್ಲಿ 18 ವರ್ಷದ ಮೇಲ್ಪಟ್ಟ ಕೋವಿಡ್ ವಾರಿಯರ್ಸ್‌ಗೆ ಇಂದಿನಿಂದ (ಮೇ. 23) ಕೋವಿಡ್ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಪ್ರತಿ ದಿನ ಒಂದೊಂದು ಇಲಾಖೆಯ ನೌಕರರಿಗೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಮಹದೇವಯ್ಯ ತಿಳಿಸಿದರು.
ಕೆಎಸ್‌ಆರ್‌ಟಿಸಿ, ನೀರು ಸರಬರಾಜು, ವಿದ್ಯುತ್, ಶಿಕ್ಷಕರು ಹಾಗೂ ಸ್ಮಶಾನದಲ್ಲಿ ಕೆಲಸ ಮಾಡುವ 18 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಲಸಿಕೆ ನೀಡುವಂತೆ ಸರ್ಕಾರ ಆದೇಶಿಸಿದೆ. ಅದರಂತೆ ಇಂದಿನಿಂದ ಲಸಿಕೆ ನೀಡುವುದಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇಂದಿನಿಂದ ಓದಿ: ನಾನು ಸಿಎಂ ಆಗ್ಬೇಕು, ಚುನಾವಣೆಗೆ ಸ್ಪರ್ಧಿಸಿದ್ರೆ ಗೆಲ್ಲಿಸ್ತೀರಾ?: ಜನರಿಗೆ ನಟ ಉಪೇಂದ್ರ ಪ್ರಶ್ನೆ
ಜಿಲ್ಲೆಯಲ್ಲಿ ಶನಿವಾರದಂದು 1,089 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಈವರೆಗೆ ಒಟ್ಟು 1, 45,544 ಜನರು ಮೊದಲ ಡೋಸ್ ಪಡೆದಿದ್ದು, 30,816 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 6,410 ಡೋಸ್ ಕೋವ್ಯಾಕ್ಸಿನ್, 8310 ಡೋಸ್ ಕೋವಿಶೀಲ್ಡ್ ದಾಸ್ತಾನಿದೆ ಎಂದು ಮಾಹಿತಿ ನೀಡಿದರು.