ಚಾಮರಾಜನಗರ: ಕಾಂಗ್ರೆಸ್ನ ಹಿರಿಯ ರಾಜಕಾರಣಿ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಬಂದ ಬಳಿಕ ಬುದ್ದಿ ಸ್ಥಿಮಿತ ಕಳೆದುಕೊಂಡಿದ್ದಾರೆಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಸು ಪ್ರತಿಮೆ ನಿರ್ಮಾಣ ಕುರಿತು ಪ್ರತಿಕ್ರಿಯಿಸಿ, ಡಿಕೆಶಿ ಜೈಲಿಗೆ ತೆರಳಿದ ಬಳಿಕ ಬುದ್ದಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ನೀಡುತ್ತಿರುವ ಹೇಳಿಕೆಗಳು, ಪ್ರತಿಮೆ ನಿರ್ಮಾಣದ ವಿಷಯಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲವಾಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ ದೇಶಾದ್ಯಂತ ಹಬ್ಬಿರುವ ಸಿಎಎ ಕಿಚ್ಚಿನ ಕುರಿತು ಮಾತನಾಡಿ, ಸಿಎಎ ಸಂವಿಧಾನ ವಿರೋಧಿಯಲ್ಲ, ಸಂಸತ್ತಿನಲ್ಲಿ ಸುದೀರ್ಘವಾಗಿ ಸಿಎಎ ಬಗ್ಗೆ ಚರ್ಚಿಸಲಾಗಿದೆ. ಲೋಕಸಭೆಯಲ್ಲೂ ಚರ್ಚಿಸಲಾಗಿದೆ. ರಾಷ್ಟ್ರಪತಿಗಳ ಅಂಕಿತವೂ ಇದೆ ಎಂದರು.
ನಮ್ಮ ದೇಶದ ಮುಸ್ಲಿಂ ಮತ್ತು ದಲಿತ ಸಮುದಾಯಗಳಿಗೆ ಸಿಎಎ ಕಾಯ್ದೆಯಿಂದ ಯಾವ ತೊಂದರೆ ಇಲ್ಲ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬರುವ ವಲಸಿಗರಿಗೆ ಇದು ಮಾತ್ರ ಸಿಮೀತವಾದದ್ದು. ಭಾರತ ದೇಶದ ಯಾವುದೇ ಜನಾಂಗಕ್ಕೂ ಎಳ್ಳಷ್ಟು ಸಮಸ್ಯೆಯಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಈ ಕಾಯ್ದೆ ಅನುಷ್ಠಾನ ಮಾಡಲಾಗುತ್ತಿದೆ. ಸಿ.ಎ.ಎ ಮತ್ತು ಎನ್.ಆರ್.ಸಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ಯವಾಗುತ್ತಿರುವ ಹಿನ್ನಲೆಯಲ್ಲಿ, ಪರ ಮತ್ತು ವಿರೋಧ ಮಾಡುವ ಹಕ್ಕು ಪ್ರಜೆಗಳಿಗೆ ಇದೆ. ಪ್ರತಿಭಟನೆ ಹಿಂಸಾತ್ಮಕ ಮಾರ್ಗ ಹಿಡಿಯಬಾರದು, ಶಾಂತಿಯೂತವಾಗಿ ಹೋರಾಟ ಮಾಡಬೇಕು ಎಂದರು.
ದೇಶದ ಜನರು ಪ್ರಚೋದನಾತ್ಮಕ ಹೇಳಿಕೆಗಳಿಗೆ ಕಿವಿ ಕೊಡಬಾರದು. ಶಾಂತಿಯುತವಾಗಿ ಹೋರಾಟಮಾಡಬೇಕು. ಭಾರತ ದೇಶದಲ್ಲಿರುವ ಮುಸ್ಲಿಂಂ, ದಲಿತ ಹಾಗೂ ಇನ್ನಿತರೆ ಯಾವುದೇ ದರ್ಮಕ್ಕೆ ಸಿ.ಎ.ಎ ಕಾಯ್ದೆಯ ತೊಂದರೆಯಿಲ್ಲ ಎಂದು ತಿಳಿಸಿದರು.