ETV Bharat / state

ಹೊರಗಿನವರೆಂಬ ಟೀಕೆಗೆ ಠಕ್ಕರ್: ಚಾಮರಾಜನಗರದ ಮತದಾರರಾದ ಸೋಮಣ್ಣ, ಪತ್ನಿ - ಮತದಾರರ ಪಟ್ಟಿ

ಬೆಂಗಳೂರಿನ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿದ್ದ ವಿ.ಸೋಮಣ್ಣ ಚಾಮರಾಜನಗರ ಅಭ್ಯರ್ಥಿಯಾದ ಬಳಿಕ ಚಾಮರಾಜನಗರ ಮತದಾರರ ಪಟ್ಟಿಗೆ ತಮ್ಮ ಹಾಗೂ ಪತ್ನಿ ಶೈಲಜಾ ಹೆಸರು ಸೇರ್ಪಡೆ ಮಾಡಿದ್ದಾರೆ.

V Somanna
ವಿ. ಸೋಮಣ್ಣ
author img

By

Published : May 8, 2023, 8:07 AM IST

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿ. ಸೋಮಣ್ಣ

ಚಾಮರಾಜನಗರ: ಸಚಿವ ವಿ.ಸೋಮಣ್ಣ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯಾಗುವುದರ ಜತೆಗೆ ಜಿಲ್ಲೆಯ ಮತದಾರರ ಪಟ್ಟಿಗೂ ಸೇರಿಕೊಂಡಿದ್ದಾರೆ. ಬೆಂಗಳೂರಿನ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿದ್ದ ಇವರು ಚಾಮರಾಜನಗರ ಅಭ್ಯರ್ಥಿಯಾದ ನಂತರ ಚಾಮರಾಜನಗರ ಮತದಾರರ ಪಟ್ಟಿಗೆ ತಮ್ಮ ಹೆಸರು ಹಾಗೂ ಪತ್ನಿ ಶೈಲಜಾ ಹೆಸರನ್ನೂ ಸೇರಿಸಿದ್ದಾರೆ.

ಚಾಮರಾಜನಗರದ ಶಂಕನಪುರ ಬಡಾವಣೆಯ ಮನೆ ವಿಳಾಸ ಕೊಟ್ಟಿದ್ದಾರೆ. ತಮ್ಮ ಪರವಾಗಿ ಮತ ಚಲಾಯಿಸಿಕೊಳ್ಳುವುದರೊಂದಿಗೆ 'ಹೊರಗಿನ ಅಭ್ಯರ್ಥಿ' ಎಂಬ ಮೂದಲಿಕೆಗೆ ಸೋಮಣ್ಣ ಠಕ್ಕರ್ ಕೊಟ್ಟಿದ್ದು, ಚಾಮರಾಜನಗರದಲ್ಲೇ ಇರುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ. "ಚಾಮರಾಜನಗರ ಅಭ್ಯರ್ಥಿ ಆದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಲವಕಾಶವಿದ್ದ ಹಿನ್ನೆಲೆಯಲ್ಲಿ ನಾನು ಹಾಗೂ ನನ್ನ ಶ್ರೀಮತಿ ಇಲ್ಲಿಗೆ ಮತದಾನವನ್ನು ವರ್ಗಾಯಿಸಿಕೊಂಡಿದ್ದೇನೆ. ನಾನಿದ್ದದ್ದು ವಿಜಯನಗರ, ಗೋವಿಂದರಾಜನಗರ ಹಾಗೂ ಬಿನ್ನಿಪೇಟೆ ಕ್ಷೇತ್ರ ಆಗಿತ್ತು. ನನ್ನ ಪರವಾಗಿ ನಾನು 3-4 ಬಾರಿಯಷ್ಟೇ ಮತ ಚಲಾಯಿಸಿಕೊಂಡಿರುವುದು. ಈ ಬಾರಿ ಚಾಮರಾಜನಗರದಲ್ಲಿ ಮತ ಚಲಾಯಿಸಿಸುತ್ತೇನೆ" ಎಂದು ತಿಳಿಸಿದರು.

'ಕಾಂಗ್ರೆಸ್​​ಗೆ ಮತ ಯಾವ ಪುರುಷಾರ್ಥಕ್ಕೆ?': ವರುಣ ಚುನಾವಣಾ ಅಖಾಡ ವರ್ಣರಂಜಿತವಾಗಿದೆ. ಪ್ರತಿ ಊರಿಗೂ ಭೇಟಿ ಕೊಟ್ಟಿದ್ದೇನೆ. ನಾನು ಗೆದ್ದ ಬಳಿಕ ಇಡೀ ಕ್ಷೇತ್ರವನ್ನೇ ಬದಲಿಸುತ್ತೇನೆ ಎಂದು ಸೋಮಣ್ಣ ಭರವಸೆ ನೀಡಿದರು. ಚಾಮರಾಜನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ಗೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕು?, ಸಿದ್ದರಾಮಯ್ಯ ಹೆಜ್ಜೆ ಗುರುತುಗಳು ವರುಣ ಕ್ಷೇತ್ರದಲ್ಲಿ ಏನೂ ಇಲ್ಲ ಎಂದು ಹರಿಹಾಯ್ದರು.

ಕೆಲ‌‌ವು ಕಿಡಿಗೇಡಿಗಳು ನಾನು ನನ್ನ ಮಗನನ್ನು ಎಂಎಲ್ಎ ಮಾಡಲು ಚಾಮರಾಜನಗರಕ್ಕೆ ಬಂದಿದ್ದೇನೆಂದು ವದಂತಿ ಹಬ್ಬಿಸುತ್ತಿದ್ದಾರೆ. ಇದಕ್ಕೆಲ್ಲ ಜನರು ಕಿವಿಗೊಡಬಾರದು. ವರಿಷ್ಠರು ಇಲ್ಲಿಗೆ ಕಳುಹಿಸಿದ್ದು ನಾನು ಬಂದಿದ್ದೇನೆ. ಚಾಮರಾಜನಗರ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬಂದಿದ್ದು. ನನ್ನ ಮಗನನ್ನು ಎಂಎಲ್ಎ ಮಾಡಲು ಬಂದಿಲ್ಲ‌ ಎಂದರು. ಹೊರಗಿನವರು, ಬೆಂಗಳೂರಿಗೆ ಹೊರಟು ಹೋಗುತ್ತಾರೆ ಎಂಬುದನ್ನು ಜನರು ನಂಬಬಾರದು. ಇಲ್ಲೇ ಮನೆ ಮಾಡಿದ್ದೇನೆ. ಇಲ್ಲೇ ಇರುತ್ತೇನೆ. ನಾನು ಇಲ್ಲಿನ ಮತದಾರನೂ ಆಗಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ವರುಣ ಕ್ಷೇತ್ರವನ್ನು ಚಿನ್ನದ ತಕ್ಕಡಿಯಲ್ಲಿ ತೂಗುವಂತೆ ಮಾಡಬಹುದಿತ್ತು: ವಿ. ಸೋಮಣ್ಣ

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ವರುಣ ಕ್ಷೇತ್ರದಲ್ಲಿ ಎರಡು ಬಾರಿ ಸಿದ್ದರಾಮಯ್ಯ ಹಾಗೂ ಅವರ ಮಗ ಡಾ.ಯತೀಂದ್ರ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರವನ್ನು ಚಿನ್ನದ ತಕ್ಕಡಿಯಲ್ಲಿ ತೂಗುವಂತೆ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಮತ ಪಡೆದ ತಂದೆ-ಮಗ ಕ್ಷೇತ್ರವನ್ನು ಮರೆತರು ಎಂದು ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಭದ್ರಕೋಟೆ ಛಿದ್ರಗೊಳಿಸಿ ಬಾವುಟ ಹಾರಿಸಲಿದ್ದಾರಾ ಸೋಮಣ್ಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.