ಚಾಮರಾಜನಗರ: ಸಮಾಜದಲ್ಲಿ ರೇಪ್ಗಳು ನಡೆಯುತ್ತವೆ, ಏನು ಮಾಡಲಾಗಲ್ಲ ಎಂದು ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಚಾಮರಾಜನಗರ ತಾಲೂಕಿನ ಕೆ.ಗುಡಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದಾರೆ.
ಇವೆಲ್ಲವೂ ಸಮಾಜದಲ್ಲಿ ನಡೆಯುತ್ತವೆ, ನಡೆಯಬಾರದು ಆದರೂ ನಡೆಯುತ್ತದೆ, ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದು, ಇದರ ಬಗ್ಗೆ ಹೆಚ್ಚು ಮಾತನಾಡಲು ತಾನು ಗೃಹ ಸಚಿವನಲ್ಲ ಎಂದರು.
ಉಮೇಶ್ ಕತ್ತಿ ಅವರು ನಿನ್ನೆ ಬಂಡೀಪುರದಲ್ಲಿ ಒಬ್ಬರಿಗೆ 5 ಕೆ.ಜಿ ಅಕ್ಕಿ ಸಾಕು ಎಂದು ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದರು. ಇಂದು ಅತ್ಯಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಓದಿ: ಮೈಸೂರಿನಲ್ಲಿ ರೇಪ್ ಆದರೆ ನನ್ನನ್ನು ಯಾಕೆ ಕೇಳ್ತಿರಪ್ಪೋ: ಜಿ.ಎಂ. ಸಿದ್ದೇಶ್ವರ್