ETV Bharat / state

ಕೊಳ್ಳೇಗಾಲದ ಗೋಪಾಲಸ್ವಾಮಿ, ಬೇಗೂರಿನ ಷಡಕ್ಷರಿಸ್ವಾಮಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

author img

By

Published : Sep 5, 2021, 11:58 AM IST

ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆ ಕೊಳ್ಳೇಗಾಲದ ಶಿಕ್ಷಕ ಗೋಪಾಲಸ್ವಾಮಿ ಹಾಗೂ ಗುಂಡ್ಲುಪೇಟೆಯ ಷಡಕ್ಷರಿಸ್ವಾಮಿ ಅವರು ರಾಜ್ಯಮಟ್ಟದ ಪ್ರಶಸ್ತಿಗೆ ಅಯ್ಕೆಯಾಗಿದ್ದಾರೆ.

Two teachers awarded for best teachers on the Teachers day
ಕೊಳ್ಳೇಗಾಲದ ಶಿಕ್ಷಕ ಗೋಪಾಲಸ್ವಾಮಿ, ಬೇಗೂರಿನ ಉಪನ್ಯಾಸಕ ಷಡಕ್ಷರಿಸ್ವಾಮಿ

ಚಾಮರಾಜನಗರ: ಶಿಕ್ಷಕರ ದಿನದ ಪ್ರಯುಕ್ತ ಶಿಕ್ಷಣ ಇಲಾಖೆ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಪ್ರಶಸ್ತಿಗೆ ಕೊಳ್ಳೇಗಾಲದ ಶಿಕ್ಷಕ ಗೋಪಾಲಸ್ವಾಮಿ ಹಾಗೂ ಗುಂಡ್ಲುಪೇಟೆ ತಾಲೂಕಿನ ಶಿಕ್ಷಕ ಷಡಕ್ಷರಿಸ್ವಾಮಿ ಭಾಜನರಾಗಿದ್ದಾರೆ.

ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಜಿ.ಷಡಕ್ಷರಿಸ್ವಾಮಿ ಭೌತಶಾಸ್ತ್ರ ವಿಷಯದಲ್ಲಿ ಕಳೆದ 5 ವರ್ಷಗಳಿಂದ ಬೇಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾಗಿದ್ದಾರೆ. ಯೋಗ, ಎನ್‍ಎಸ್‍ಎಸ್, ಸ್ಪೋಟ್ಸ್, ಕೌಶಲ್ಯ ತರಬೇತಿ ಬಗ್ಗೆ ಹೆಚ್ಚಿನ ವಿಷಯ ಹಾಗೂ ಆಸಕ್ತಿ ಕಂಡು ರಾಜ್ಯ ಉಪನ್ಯಾಸಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಗಣಿತ ಶಿಕ್ಷಕನಿಗೆ ಗರಿ

ಕೊಳ್ಳೇಗಾಲ ತಾಲೂಕಿನ ಇಕ್ಕಡಹಳ್ಳಿ ಸಕಾ೯ರಿ ಶಾಲೆಯ ಗೋಪಾಲಸ್ವಾಮಿ ಅವರು ಕೂಡ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಬೆಂಗಳೂರಿನಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ, ಶಿಕ್ಷಣ ಸಚಿವ ನಾಗೇಶ್ ಇನ್ನಿತರ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಶಿಕ್ಷಣ ಇಲಾಖೆ ನಡೆಸುವ ಎನ್​ಎಂಎಸ್ ಪರೀಕ್ಷೆಯಲ್ಲಿ ತೇಗ೯ಡೆಯಾಗುವ ಮಕ್ಕಳಿಗೆ 1 ವರ್ಷಕ್ಕೆ 12 ಸಾವಿರದಂತೆ 4 ವರ್ಷ (ದ್ವೀತಿಯ ಪಿಯುಸಿ) 48 ಸಾವಿರ ಮಕ್ಕಳಿಗೆ ವಿದ್ಯಾರ್ಥಿವೇತನ ದೊರಕಲಿದೆ.

ಪುಸ್ತಕ ಹೊರತಂದ ಶಿಕ್ಷಕ

ಅಂತಹ ಪರೀಕ್ಷೆಗಳಲ್ಲಿ ಮಕ್ಕಳು ಉತ್ತೀರ್ಣರಾಗುವಂತೆ ಪ್ರೋತ್ಸಾಹಿಸಿ ಗೋಪಾಲಸ್ವಾಮಿ ಅವರು ಹೆಚ್ಚಿನ ರೀತಿಯಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆಗಳಿಗೆ ಅಣಿಗೊಳಿಸುವ ಕೆಲಸ ಮಾಡಿದ್ದಾರೆ. ಎನ್​ಎಂಎಸ್ ಪರೀಕ್ಷೆಯಲ್ಲಿ 2017-18ನೇ ಸಾಲಿನಲ್ಲಿ ಕೇವಲ ಇಬ್ಬರು ಮಕ್ಕಳು ಉತ್ತೀಣರಾಗಿದ್ದರು. ಇದನ್ನರಿತ ಗೋಪಾಲಸ್ವಾಮಿ ಅವರು ಶಿಕ್ಷಣಾಧಿಕಾರಿಗಳ ಸಹಕಾರ ಪಡೆದು ಮಕ್ಕಳ ಉತ್ತೇಜನಕ್ಕೆ ಹೆಚ್ಚಿನ ರೀತಿ ತೊಡಗಿಸಿಕೊಂಡ ಹಿನ್ನೆಲೆ 2018- 19ರಲ್ಲಿ 23 ಮಕ್ಕಳು, 2019-20ರಲ್ಲಿ 26 ಮಕ್ಕಳು ತೇರ್ಗಡೆಯಾಗುವಂತಾಯಿತು.

ಮೆಂಟಲ್ ಎಬಿಲಿಟಿ ವಿಷಯದದಲ್ಲೇ ನವೋದಯ, ಆದರ್ಶ ಶಾಲೆಗಳ ಪರೀಕ್ಷೆ ಎದುರಿಸುವ ಬಗ್ಗೆ 166 ಪುಟಗಳ ‘ಮಾಡರ್ನ್​ ಮಾಸ್ಟರ್’ ಹಾಗೂ ‘ಸ್ಪರ್ಧಾಕಲಿ’ ಎಂಬ ಶೀರ್ಷಿಕೆಯಡಿ ಪುಸ್ತಕಗಳ ಹೊರತಂದಿದ್ದಾರೆ.

ಓದಿ: ಹನುಮಸಾಗರ ಪ್ರೌಢಶಾಲಾ ಶಿಕ್ಷಕ ಕಿಶನ್​ರಾವ್​​​ಗೆ ಒಲಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.