ETV Bharat / state

ಚಾಮರಾಜನಗರ: ಜಮೀನು ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಂದು ನೇತು ಹಾಕಿದ ಮಕ್ಕಳು! - ಚಾಮರಾಜನಗರ ಅಪರಾಧ ಸುದ್ದಿ

ಚಾಮರಾಜನಗರದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪನನ್ನೇ ಕೊಂದು ನೇತು ಹಾಕಿದ ಮಕ್ಕಳು ಈಗ ಕಂಬಿ ಎಣಿಸುತ್ತಿದ್ದಾರೆ.

sons arrested for uncle murder case in Chamarajanagar, Chamarajanagar crime news, Chamarajanagar uncle murder case, ಚಿಕ್ಕಪ್ಪನನ್ನು ಕೊಂದ ಮಕ್ಕಳನ್ನು ಬಂಧಿಸಿದ ಚಾಮರಾಜನಗರ ಪೊಲೀಸರು, ಚಾಮರಾಜನಗರ ಅಪರಾಧ ಸುದ್ದಿ, ಚಾಮರಾಜನಗರ ಚಿಕ್ಕಪ್ಪ ಕೊಲೆ ಪ್ರಕರಣ,
ಜಮೀನು ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಂದು ನೇತು ಹಾಕಿದ ಮಕ್ಕಳು
author img

By

Published : Mar 31, 2022, 1:22 PM IST

ಚಾಮರಾಜನಗರ: ಕೆಲವು ದಿನಗಳ ಹಿಂದೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದ ಜಮೀನಿನಲ್ಲಿ ಶವಪತ್ತೆ ಪ್ರಕರಣವನ್ನು ಬೇಗೂರು ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ ಕಂಬಿ ಹಿಂದಕ್ಕೆ ತಳ್ಳಿದ್ದಾರೆ. ಗುಂಡ್ಲುಪೇಟೆ ತಾಲೂಕಿನ‌ ಗರಗನಹಳ್ಳಿ ಗ್ರಾಮದ ಶ್ರೀನಿಧಿ ಹಾಗೂ ಶ್ರೀನಿವಾಸ್ ಎಂಬವರು ಬಂಧಿತ ಆರೋಪಿಗಳು‌.

ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ: ಪಾಕ್​ ಮಾಜಿ ಸಚಿವನ ಆರೋಪ

ಗರಗನಹಳ್ಳಿ ಗ್ರಾಮದ ನಾಗೇಶ್ (55) ಎಂಬವರನ್ನು ದಾಯಾದಿ ಸಂಬಂಧಿಗಳಾದ ಈ ಇಬ್ಬರು ಆರೋಪಿಗಳು ಹೊಡೆದು ಕೊಂದು ಬಳಿಕ ನೇಣು ಬಿಗಿದು ಪರಾರಿಯಾಗಿದ್ದರು ಎನ್ನಲಾಗಿದೆ. ತಲೆಮರೆಸಿಕೊಂಡಿದ್ದ ಈ ಇಬ್ಬರನ್ನು ಬೇಗೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಮೀನು ವಿಚಾರಕ್ಕೆ ಸಂಬಂಧ ಚಿಕ್ಕಪ್ಪನನ್ನೇ ಕೊಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ವಿಚಾರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.