ಚಾಮರಾಜನಗರ: ರಸ್ತೆಬದಿ ಕುಳಿತ ವೃದ್ಧರಿಬ್ಬರ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಅವರಿಬ್ಬರೂ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಹೊಸ ಹಂಪಾಪುರದಲ್ಲಿ ನಡೆದಿದೆ.
ಹೊಸಹಂಪಾಪುರ ಗ್ರಾಮದ ನಿಂಗರಾಜು(70) ಮತ್ತು ಸಿದ್ಧಯ್ಯ(80) ಮೃತರು. ಕೊಳ್ಳೇಗಾಲದಿಂದ ಮುಳ್ಳೂರಿಗೆ ಕ್ರೇನ್ ತೆರಳುವಾಗ ರಸ್ತೆಬದಿ ವೃದ್ಧರು ಕುಳಿತಿರುವುದು ಕಾಣದೇ ಚಾಲಕ ವೃದ್ಧರ ಮೇಲೆಯೇ ಕ್ರೇನ್ ಹರಿಸಿದ್ದಾನೆ. ಸಮೀಪವಿದ್ದವರ ಚೀರಾಟ ಕಂಡು ಪರಾರಿಯಾಗುತ್ತಿದ್ದ ಚಾಲಕ ಆರ್ಮುಗಂ ಎಂಬಾತನನ್ನ ಸಾರ್ವಜನಿಕರೇ ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.