ಚಾಮರಾಜನಗರ: ಬೈಕ್ ಹಾಗೂ ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಯಳಂದೂರು ತಾಲೂಕಿನ ಮದ್ದೂರಿನಲ್ಲಿ ತಡರಾತ್ರಿ ನಡೆದಿದೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಆನಂದ್(28) ಮತ್ತು ಆರ್.ಎಸ್. ದೊಡ್ಡಿ ಗ್ರಾಮದ ಸಿದ್ದರಾಜು(28) ಮೃತರು. ಇವರು ಎಳನೀರು ವ್ಯಾಪಾರಿಗಳಾಗಿದ್ದು, ವ್ಯವಹಾರ ಕುದುರಿಸಿ ಊರಿಗೆ ಹಿಂದಿರುಗುವವೇಳೆ ಬೆಂಗಳೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ.
ಟಿಟಿಯಲ್ಲಿ 8 ಮಂದಿ ಇದ್ದರು ಎಂದು ತಿಳಿದುಬಂದಿದ್ದು, ಘಟನೆ ನಡೆದ ಕೂಡಲೇ ಚಾಲಕ ಪರಾರಿಯಾಗಿದ್ದಾನೆ. ಬೈಕ್ ಸವಾರ ಆನಂದ್ ಸ್ಥಳದಲ್ಲೇ ಮೃತಪಟ್ಟರೇ ಸಿದ್ದರಾಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.