ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಕರ್ನಾಟಕ ಲಲಿತಾಕಲಾ ಅಕಾಡೆಮಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಗೆ ಜಿಲ್ಲೆಯ ಇಬ್ಬರು ಕಲಾವಿದರು ಆಯ್ಕೆಯಾಗಿದ್ದಾರೆ.
ಲಲಿತಕಲಾ ಅಕಾಡೆಮಿಗೆ ಯಳಂದೂರಿನ ಚಿತ್ರ ಕಲಾವಿದ ದುಂಡು ಮಹಾದೇವ, ಜಾನಪದ ಅಕಾಡೆಮಿಗೆ ಗಾಯಕ ನರಸಿಂಹಮೂರ್ತಿ ನೇಮಕವಾಗಿದ್ದಾರೆ. ಎರಡು ಅಕಾಡೆಮಿಗಳಿಗೆ ಜಿಲ್ಲೆಯ ಇಬ್ಬರು ಸದಸ್ಯರಾಗಿರುವುದು ಚಾಮರಾಜನಗರಕ್ಕೆ ಇದೇ ಮೊದಲು ಎಂದು ತಿಳಿದುಬಂದಿದೆ.
ಜಾನಪದದ ತವರೂರು ಎಂದೇ ಹೆಸರಾಗಿರುವ ಗಡಿ ಜಿಲ್ಲೆಯ ಕಲಾವಿದರನ್ನು ಗುರುತಿಸಿ ಅವರ ಶ್ರೇಯೋಬಿವೃದ್ಧಿಗೆ ಕೆಲಸ ಮಾಡುತ್ತೇನೆ. ಜೊತೆಗೆ, ಜಾನಪದಕ್ಕೆ ಸಂಬಂಧಿಸಿದ ಮೈಲಿಗಲ್ಲಾಗುವ ಕೆಲಸವೊಂದನ್ನು ಮಾಡುತ್ತೇನೆ ಎಂದು ಗಾಯಕ ನರಸಿಂಹಮೂರ್ತಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.