ETV Bharat / state

ಶಿಥಿಲ ವೆಸ್ಲಿ ಸೇತುವೆ ಮೇಲೆ ಸೆಲ್ಫಿಗಳ ಸುರಿಮಳೆ: ತಡೆಗೋಡೆ ಹತ್ತಿ ಪ್ರಕೃತಿ ಸೊಬಗು ವೀಕ್ಷಿಸುತ್ತಿರುವ ಪ್ರವಾಸಿಗರು

author img

By

Published : Aug 10, 2020, 11:10 AM IST

ಶಿಥಿಲ ವೆಸ್ಲಿ ಸೇತುವೆ ಮೇಲೆ ಮಲಗುವುದು, ಹೊಸ ಸೇತುವೆ ಬಳಿ ಒಂದು ಕಾಲಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವ ಅಪಾಯಕಾರಿ ನಡೆಯನ್ನ ಪ್ರವಾಸಿಗರು ಪ್ರದರ್ಶಿಸುತ್ತಿದ್ದಾರೆ.

Chamarajanagar
ಶಿಥಿಲ ವೆಸ್ಲಿ ಸೇತುವೆ ಮೇಲೆ ಸೆಲ್ಫಿ ಸುರಿಮಳೆ..

ಚಾಮರಾಜನಗರ: ಪ್ರವಾಹದ ವೇಳೆ ಮನೆ ಕಳೆದುಕೊಳ್ಳುವ ಆತಂಕ, ಬೆಳೆ ನಷ್ಟವಾಗುವ ಭೀತಿಯ ನಡುವೆ ಆನಂದಿಸಿ, ಕಿಡಿಗೇಡಿತನ ಮೆರೆಯುವುದು ಮುಂದುವರಿಯುತ್ತಿರುವುದಕ್ಕೆ ಈ ಸೆಲ್ಫಿಗಳ ಸುರಿಮಳೆಯೇ ಸಾಕ್ಷಿಯಾಗಿದೆ.

ಶಿಥಿಲ ವೆಸ್ಲಿ ಸೇತುವೆ ಮೇಲೆ ಸೆಲ್ಫಿ ಸುರಿಮಳೆ: ತಡೆಗೋಡೆಯನ್ನೂ ಹತ್ತುತ್ತಿರುವ ಪ್ರವಾಸಿಗರು

ಹೌದು, ಕಾವೇರಿ ಅಪಾಯಾಕಾರಿಯಾಗಿ ಕೊಳ್ಳೇಗಾಲದ ಐತಿಹಾಸಿಕ ವೆಸ್ಲಿ ಸೇತುವೆಯಿಂದ ಹಾದು ಹೋಗುತ್ತಿದ್ದು, ಪ್ರವಾಸಿಗರು, ಸ್ಥಳೀಯರು ವೆಸ್ಲಿ ಸೇತುವೆ ಮೇಲೆ ನಡೆದು ಹೋಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೂ ಪೊಲೀಸರು ಹಾಗೂ ಸಂಬಂಧಪಟ್ಟವರು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಶಿಥಿಲ ವೆಸ್ಲಿ ಸೇತುವೆ ಮೇಲೆ ಮಲಗುವುದು, ಹೊಸ ಸೇತುವೆ ಬಳಿ ಒಂದು ಕಾಲಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವ ಹುಂಬತನವನ್ನೂ ಪ್ರವಾಸಿಗರು ಪ್ರದರ್ಶಿಸುತ್ತಿದ್ದಾರೆ. ಸೇತುವೆ‌ಗೆ ತೆರಳದಂತೆ ತಡೆಗೋಡೆ ನಿರ್ಮಿಸಿದರೂ ಅದನ್ನು ಹತ್ತಿ ಪ್ರವಾಸಿಗರು ಹೋಗುತ್ತಿದ್ದು, ಸೇತುವೆ ಮುಳಗುಡೆಗೆ ಕೆಲವೇ ಅಡಿಗಳು ಬಾಕಿ ಇದೆ. ಇಷ್ಟಿದ್ದರೂ ಯುವಕರು ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ.

Chamarajanagar
ಶಿಥಿಲ ವೆಸ್ಲಿ ಸೇತುವೆ ಮೇಲೆ ಸೆಲ್ಫಿ ಸುರಿಮಳೆ: ತಡೆಗೋಡೆ ಹತ್ತುತ್ತಿರುವ ಪ್ರವಾಸಿಗರು

ಬದಲಾದ ನಿಲುವು: ಭರಚುಕ್ಕಿ ಜಲಪಾತಕ್ಕೆ ಭಾನುವಾರ ಬೆಳಗ್ಗೆ ಪ್ರವೇಶ ನೀಡಿ ಬಳಿಕ ಸಂಜೆ ವೇಳೆಗೆ ಜಿಲ್ಲಾಡಳಿತ ಗುರುವಾರದವರೆಗೆ ಮತ್ತೆ ನಿರ್ಬಂಧ ವಿಧಿಸಿ ಪ್ರವಾಸಿಗರನ್ನು ಪೇಚಿಗೆ ಸಿಲುಕಿಸಿದ ಘಟನೆಯೂ ನಡೆದಿದೆ. ದಿಢೀರ್​​​​ ಅಂತಾ ಪ್ರವೇಶ ನೀಡಿ, ಅಷ್ಟೇ ವೇಗವಾಗಿ ನಿರ್ಬಂಧ ಹೇರಿದ್ದೇಕೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.