ETV Bharat / state

ನಿವೃತ್ತಿ ಅಂಚಿನಲ್ಲೂ ದಣಿವರಿಯದೇ ಕೆಲಸ: ಚಾಮರಾಜನಗರದ ಕೊರೊನಾ ಹೀರೋಗಳಿವರು !

ಚಾಮರಾಜನಗರದ ಮೂವರು ಪೊಲೀಸ್​ ಅಧಿಕಾರಿಗಳು ನಿವೃತ್ತಿ ಅಂಚಿನಲ್ಲಿದ್ದರೂ, ಯುವಕರನ್ನು ನಾಚಿಸುವಂತೆ ದುಡಿಯುತ್ತಿದ್ದಾರೆ. ಚಾಮರಾಜನಗರ ಪೊಲೀಸ್ ಠಾಣೆಯ ಕ್ರೈಂ ಪಿಎಸ್​ಐ ಸಿದ್ದರಾಜನಾಯ್ಕ, ಎಎಸ್​​ಐ ಮಹೇಶ್, ನಾಗಪ್ಪ‌ ಅವರು ಲಾಕ್​​ಡೌನ್​​ ಪ್ರಾರಂಭವಾದಗಿನಿಂದ ಇಂದಿನವರೆಗೂ ಒಂದು ದಿನ ರಜೆ ಪಡೆಯದೇ ಕೆಲಸ ಮಾಡುತ್ತಿದ್ದಾರೆ.

author img

By

Published : May 21, 2020, 10:50 PM IST

Updated : May 22, 2020, 12:05 AM IST

ಚಾಮರಾಜನಗರದ ಕೊರೊನಾ ಹೀರೋಗಳಿವರು !
ಚಾಮರಾಜನಗರದ ಕೊರೊನಾ ಹೀರೋಗಳಿವರು !

ಚಾಮರಾಜನಗರ: ಕೋವಿಡ್-19 ಭೀತಿ ಎಲ್ಲರನ್ನೂ ತತ್ತರಿಸುವಂತೆ ಮಾಡಿದೆ‌. ಜೀವದ ಹಂಗು ತೊರೆದು ವೈದ್ಯರು, ನರ್ಸ್ ಗಳು ಅದೇ ರೀತಿ ಪೊಲೀಸರು ಮಹಾಮಾರಿ ವಿರುದ್ಧ ಹೋರಾಡುತ್ತಿದ್ದಾರೆ. ಚಾಮರಾಜನಗರದ ಈ ಮೂವರು ಪೊಲೀಸರು ನಿವೃತ್ತಿ ಅಂಚಿನಲ್ಲಿದ್ದರೂ ಯುವಕರನ್ನು ನಾಚಿಸುವಂತೆ ದುಡಿಯುತ್ತಿದ್ದಾರೆ.

ಚಾಮರಾಜನಗರದ ಕೊರೊನಾ ಹೀರೋಗಳಿವರು !
ಚಾಮರಾಜನಗರದ ಕೊರೊನಾ ಹೀರೋಗಳಿವರು !

ಚಾಮರಾಜನಗರ ಪೊಲೀಸ್ ಠಾಣೆಯ ಕ್ರೈಂ ಪಿಎಸ್​ಐ ಸಿದ್ದರಾಜನಾಯ್ಕ ಅವರಿಗೆ 59 ವರ್ಷವಾಗಿದೆ. ಇನ್ನು, ಎಎಸ್​​ಐ ಮಹೇಶ್ ಅವರಿಗೆ 57 ವರ್ಷ, ನಾಗಪ್ಪ‌ ಅವರಿಗೆ 59 ವರ್ಷವಾಗಿದೆ. ಆದ್ರೆ ಇವರು ದಣಿವರಿಯದಂತೆ ಬೆಳಗ್ಗೆ 5.30 ಕ್ಕೆ ಕಾರ್ಯ ಆರಂಭಿಸಿ, ರಾತ್ರಿ 8.30 ರವರೆಗೂ ಮಾಡುತ್ತಾರೆ.

ಚಾಮರಾಜನಗರದ ಕೊರೊನಾ ಹೀರೋಗಳಿವರು !
ಚಾಮರಾಜನಗರದ ಕೊರೊನಾ ಹೀರೋಗಳಿವರು !

ಕೊರೊನಾ ಲಾಕ್​​ಡೌನ್​​ ಪ್ರಾರಂಭವಾದಗಿನಿಂದ ಇಂದಿನವರೆಗೂ ಮೂವರು ಒಂದು ದಿನ ರಜೆಯನ್ನು ಪಡೆದಿಲ್ಲ. ಬೆಳಗ್ಗೆ ಎಪಿಎಂಸಿಯಿಂದ ಕಾರ್ಯ ಪ್ರಾರಂಭಿಸಿ, ರಾತ್ರಿವರೆಗೂ ಜನರಿಗೆ ಸಾಮಾಜಿಕ ಅಂತರದ ಪಾಠ, ಸಂಚಾರ ನಿಯಮ ಗಾಳಿಗೆ ತೂರಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುವವರ ಚಳಿಯನ್ನು ಬಿಡಿಸುತ್ತಿದ್ದಾರೆ.

ಚಾಮರಾಜನಗರದ ಕೊರೊನಾ ಹೀರೋಗಳಿವರು !
ಚಾಮರಾಜನಗರದ ಕೊರೊನಾ ಹೀರೋಗಳಿವರು !

ಸಾಮಾಜಿಕ‌ ಅಂತರದ ಜಾಗೃತಿ:

ಸಾಮಾಜಿಕ ಅಂತರ, ಮುಖಗವಸು ಇನ್ನಿತರ ಚಟುವಟಿಕೆ ಮೇಲೆ ಕಣ್ಣಿಡುವ ಇವರು ಬಳಿಕ ಅಂಗಡಿ ಮುಂಗಟ್ಟುಗಳು, ಮಾಂಸದಂಗಡಿಗಳು, ಬಸ್ ನಿಲ್ದಾಣದ ಮುಂದೆ ಸಾಮಾಜಿಕ‌ ಅಂತರದ ಜಾಗೃತಿ ಮೂಡಿಸುತ್ತಾರೆ. ಬಳಿಕ, ಸಿಟಿ ರೌಂಡ್ಸ್, ಲಾಕ್​​ಡೌನ್​​ ಪಾಲನೆ, ಪುಂಡರ ಅನಗತ್ಯ ಓಡಾಟ, ಗುಂಪು ಸೇರಿ ಹರಟೆ ಹೊಡೆಯುವವರ ಮೇಲೆ ಕಣ್ಣಿಡುತ್ತಾರೆ. ಸಂಜೆಯಿಂದ ನಗರ ರೌಂಡ್ಸ್ ಹಾಕಿ ಸಂಜೆ 7 ಕ್ಕೆ ಅಂಗಡಿ, ವೈನ್ ಸ್ಟೋರ್ ಮುಚ್ಚಿಸಿ ಗುಂಪು ಸೇರುವವರನ್ನು ಮನೆಗೆ ಕಳುಹಿಸುತ್ತಾರೆ. ಈ ನಡುವೆ, ಠಾಣೆಗೆ ಬರುವ ಪ್ರಕರಣಗಳ ವಿಚಾರಣೆ, ಹಿಂದಿನ‌ ಕೇಸ್​​ಗಳ ತನಿಖೆಯತ್ತ ಗಮನ‌ ಹರಿಸುವ ಇವರು ದಣಿವರಿಯದ‌ಂತೆ ದುಡಿಯುತ್ತಿದ್ದಾರೆ.

ಇವರ ತಲೆ, ಕಣ್ಣಲ್ಲಿದೆ ವೀರಪ್ಪನ್ ಬುಲೆಟ್:

ಪಿಎಸ್ಐ ಸಿದ್ದರಾಜನಾಯ್ಕ ವೀರಪ್ಪನ್ ಕಾರ್ಯಾಚರಣೆಯಲ್ಲೂ ಪಾಲ್ಗೊಂಡವರಾಗಿದ್ದು, ಈಗಲೂ ಆತ ಹಾರಿಸಿದ ಗುಂಡುಗಳು ಇವರ ತಲೆ ಮತ್ತು ಕಣ್ಣಿನಲ್ಲಿ ಹಾಗೆ ಇದೆ. ಜೊತೆಗೆ, ಮಧುಮೇಹಿಯೂ ಆಗಿರುವ ಇವರು ಯಾವುದಕ್ಕೂ ಬಗ್ಗದೇ ಕೊರೊನಾ ತಡೆಯುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಚಾಮರಾಜನಗರದ ಕೊರೊನಾ ಹೀರೋಗಳಿವರು !
ಚಾಮರಾಜನಗರದ ಕೊರೊನಾ ಹೀರೋಗಳಿವರು !

ಎಎಸ್ಐ ನಾಗಪ್ಪ ಅವರೂ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಯಾಗಿದ್ದು, ಮಹಾಮಾರಿ ವಿರುದ್ಧ ಹೋರಾಡಿ ಜನರನ್ನು ರಕ್ಷಿಸುವ ಪುಣ್ಯದ ಕಾರ್ಯ ಇದಾಗಿದೆ ಎಂತಲೇ ದುಡಿಯುತ್ತಿದ್ದಾರೆ.

ಮಹೇಶ್ ಅವರಿಗೂ 57 ವರ್ಷ ತುಂಬಿದ್ದು, ನಿವೃತ್ತಿ ವೇಳೆಯಲ್ಲಿ ಈ ಹಿಂದೆ ಕಂಡು ಕೇಳರಿಯದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾರ್ಯ ಮಾಡುವುದರಲ್ಲಿ ನಮ್ಮದೂ ಒಂದು ಅಳಿಲು ಸೇವೆ ಇದಾಗಿದೆ ಎಂದು ಕೆಲಸ ಮಾಡುವ ಮೂಲಕ ಇನ್ನಿತರರಿಗೆ ಮಾದರಿಯಾಗಿದ್ದಾರೆ.

Last Updated : May 22, 2020, 12:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.