ಚಾಮರಾಜನಗರ : ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನಲ್ಲಿ ಮೂಕಳ್ಳಿ ಕಾಲೋನಿ ಹಾಗೂ ಶಿವಪುರ ಸಮೀಪದ ಕಲ್ಕಟ್ಟೆ ಕೆರೆಯಲ್ಲಿ ನಡೆದಿದೆ. ಇಬ್ಬರು ಬಾಲಕರು ನೀರುಪಾಲಾದ್ರೆ, ಇನ್ನೊಬ್ಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗುಂಡ್ಲುಪೇಟೆ ತಾಲೂಕಿನ ಮೂಕಳ್ಳಿ ಕಾಲೋನಿಯ ನಿವಾಸಿಗಳಾದ ಮಹೇಶ್ (15) ಹಾಗೂ ವಿಶ್ವ (17) ಹೊಸಕಟ್ಟೆ ಎಂಬ ಕೆರೆಯಲ್ಲಿ ಈಜಲು ತೆರಳಿದ್ದಾಗ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಯಾವುದೇ ದೂರಾಗಲಿ, ಪ್ರಕರಣವಾಗಲಿ ದಾಖಲಾಗಿಲ್ಲ.
ಓದಿ: ಅಂಕೋಲಾ: ಕಪ್ಪೆ ಚಿಪ್ಪು ತೆಗೆಯುವಾಗ ಕಾಲು ಜಾರಿ ಮೂವರು ವಿದ್ಯಾರ್ಥಿಗಳು ನೀರುಪಾಲು
ಮಾನಸಿಕವಾಗಿ ನೊಂದ ಯುವಕನೊಬ್ಬ ನೀರಿಗೆ ಹಾರಿ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಕೆರೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಎಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆ ಮೃತ ಯುವಕ 24 ವರ್ಷದ ವಿಜಿ ಎಂದು ಗುರುತಿಸಲಾಗಿದೆ. ಸದ್ಯ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.