ETV Bharat / state

ಕರ್ತವ್ಯ ಲೋಪ: ಚಾಮರಾಜನಗರ ಸಿಪಿಐ, ಪಿಎಸ್ಐ ಸೇರಿ ಮೂವರ ಅಮಾನತು - ಕರ್ತವ್ಯ ಲೋಪ: ಚಾಮರಾಜನಗರ ಸಿಪಿಐ, ಪಿಎಸ್ಐ ಸೇರಿ ಮೂವರ ಅಮಾನತು

ಕರ್ತವ್ಯಲೋಪ ಆರೋಪದಡಿ ಸಿಪಿಐ ಕೆ.ಎಂ. ಮಂಜು, ಪಿಎಸ್ಐ ಸುನೀಲ್ ಹಾಗೂ ಹೆಡ್​ಕಾನ್ಸ್‌ಟೇಬಲ್ ನಾಗನಾಯಕ ಅಮಾನತುಗೊಂಡಿದ್ದಾರೆ.

Chamarajanagar
ಕರ್ತವ್ಯ ಲೋಪ: ಚಾಮರಾಜನಗರ ಸಿಪಿಐ, ಪಿಎಸ್ಐ ಸೇರಿ ಮೂವರ ಅಮಾನತು
author img

By

Published : Jun 11, 2020, 10:45 PM IST

Updated : Jun 12, 2020, 9:06 AM IST

ಚಾಮರಾಜನಗರ: ಕರ್ತವ್ಯಲೋಪ ಆರೋಪದ ಮೇಲೆ ಚಾಮರಾಜನಗರ ಗ್ರಾಮಾಂತರ ಸಿಪಿಐ, ಚಾಮರಾಜನಗರ ಪೂರ್ವ ಠಾಣೆ ಪಿಎಸ್ಐ ಮತ್ತು ಹೆಡ್ ಕಾನ್ಸ್‌ಟೇಬಲ್​ರನ್ನು ಅಮಾನತುಪಡಿಸಿ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಆದೇಶಿಸಿದ್ದಾರೆ.

ಸಿಪಿಐ ಕೆ.ಎಂ. ಮಂಜು, ಪಿಎಸ್ಐ ಸುನೀಲ್ ಹಾಗೂ ಹೆಡ್​ಕಾನ್ಸ್‌ಟೇಬಲ್ ನಾಗನಾಯಕ ಅಮಾನತುಗೊಂಡವರು. ಮೇ 15ರಂದು ಮರಳು ತುಂಬಿದ್ದ ಟಿಪ್ಪರ್​ವೊಂದು ನಿಂತಿದ್ದರ ಮಾಹಿತಿ ಪಡೆದು ಸಿಪಿಐ ತೆರಳಿದ್ದ ವೇಳೆ ಪೊಲೀಸ್​ರನ್ನು ಕಂಡ ಲಾರಿ ಚಾಲಕ ತಪ್ಪಿಸಿಕೊಳ್ಳುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಗೆ ಸಿಲುಕಿ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ. ಆದರೆ, ಮರಳು ಸಾಗಣೆ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕಲು ಯತ್ನಿಸುತ್ತಿರುವ ಆರೋಪ ಇದೀಗ ಹೊರಬಿದ್ದಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸದೇ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಮೂವರನ್ನು ಅಮಾನತು ಗೊಳಿಸಿದ್ದು, ಹೆಚ್ಚಿನ‌ ತನಿಖೆಗೆ ಐಜಿಪಿ ಸೂಚಿಸಿದ್ದಾರೆ.

Last Updated : Jun 12, 2020, 9:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.