ಚಾಮರಾಜನಗರ: ಚಿರತೆ ಎಂದಾಕ್ಷಣ ರಸ್ತೆ ದಾಟುವುದು, ಮರದ ಮೇಲೆ ಬೇಟೆ ತಿನ್ನುವ ದೃಶ್ಯ ಸಾಮಾನ್ಯ. ಆದರೆ, ಬಂಡೀಪುರ ಸಫಾರಿಯಲ್ಲಿ ಮೂರು ಚಿರತೆಗಳು ಒಟ್ಟಾಗಿ ಮರದ ಮೇಲೆ ಕುಳಿತು ವಿರಮಿಸುತ್ತಿರುವುದು ಕಂಡುಬಂದಿದ್ದು, ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ವನ್ಯಜೀವಿ ಛಾಯಾಗ್ರಾಹಕ ಅಬ್ದುಲ್ ಅಜೀಜ್ ಎಂಬುವರ ಕ್ಯಾಮರಾದಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಮರವೊಂದರ ಕೊಂಬೆ ಮೇಲೆ ಕುಳಿತ ವಿಡಿಯೋ ಇದಾಗಿದ್ದು, ಸಫಾರಿಗರನ್ನೇ ಚಿರತೆಗಳು ದಿಟ್ಟಿಸಿ ನೋಡುವಂತಿದೆ ಈ ದೃಶ್ಯ.
ಇದನ್ನೂ ಓದಿ: ಚಿರತೆ ಆಹಾರವಾಗಬೇಕಿದ್ದ ನಾಯಿ ಗ್ರೇಟ್ ಎಸ್ಕೇಪ್: ವಿಡಿಯೋ ವೈರಲ್
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಫಾರಿಗರಿಗೆ ವನ್ಯಪ್ರಾಣಿಗಳು ಸಖತ್ ದರ್ಶನ ಕೊಡುತ್ತಿದ್ದು ಹುಲಿ, ಆನೆ ಹಿಂಡುಗಳು ಕೂಡ ಪ್ರವಾಸಿಗರ ಕಣ್ಣಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ.
ಇದನ್ನೂ ಓದಿ: Viral Video: ಬೃಹತ್ ಹಾವು ಅಡಿಕೆ ಮರ ಹತ್ತೋದು ನೋಡಿದ್ದೀರಾ?