ETV Bharat / state

ಚಿನ್ನ ಕದ್ದು ಜೈಲು ಸೇರಿದ ಲವರ್ಸ್: ಸಾಥ್ ಕೊಟ್ಟ ಸ್ನೇಹಿತನಿಗೂ ಜೈಲೂಟ - ಚಿನ್ನ ಕದ್ದು ಜೈಲು ಸೇರಿದ ಲವರ್ಸ್

ಮಾಲೀಕನ ಮನೆಯಲ್ಲಿ ಚಿನ್ನಾಭರಣ, ಹಣ ಕದ್ದ ನೌಕರಸ್ಥ ಮತ್ತು ಆತನ ಪ್ರೇಯಸಿ ಸೇರಿ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

theft case
ಮನೆ ಕಳ್ಳತನ ಪ್ರಕರಣ
author img

By

Published : Feb 3, 2023, 10:37 PM IST

ಚಾಮರಾಜನಗರ: ಹಣದ ವ್ಯಾಮೋಹಕ್ಕೊಳಗಾದ ಯುವಕನೋರ್ವ 10 ವರ್ಷದಿಂದ ಗಳಿಸಿದ್ದ ನಂಬಿಕೆಗೆ ಇತಿಶ್ರೀ ಹಾಡಿ ಜೈಲು ಸೇರಿದ್ದಾನೆ.‌ ಜೊತೆಗೆ, ಕಂಬಿ ಎಣಿಕೆಗೆ ತನ್ನ ಪ್ರೇಯಸಿ, ಸ್ನೇಹಿತನನ್ನೂ ಕರೆದೊಯ್ದಿದ್ದಾನೆ. ಜಿಲ್ಲೆಯ ಕೊಳ್ಳೇಗಾಲದ ಶ್ರೀ ಬಸವೇಶ್ವರ ನಗರದ ನಿವಾಸಿ ಹಾಗೂ ದತ್ತ ಮೆಡಿಕಲ್ ಮಾಲೀಕ ವಿನಯ್ ಅವರ ಮನೆಯಲ್ಲಿ ಚಿನ್ನಾಭರಣ ಹಾಗೂ ಹಣ ಕದ್ದಿದ್ದ ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮದ ಭರತ್, ಗುಂಡ್ಲುಪೇಟೆಯ ಕಾವ್ಯಾ, ಮೈಸೂರಿನ ಲೋಹಿತ್ ಕುಮಾರ್‌ ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ದುಡ್ಡಿನಾಸೆಗೆ ನಂಬಿಕೆ ದ್ರೋಹ: ದತ್ತ ಮೆಡಿಕಲ್ ಮಾಲೀಕ ವಿನಯ್ ಅವರು ಶಿವಮೊಗ್ಗದಲ್ಲಿರುವ ಬಾವನ ಮನೆಗೆ ಹೋಗಿದ್ದರು. ಇವರ ಪತ್ನಿ ರಶ್ಮಿ ಮನೆಗೆ ಬೀಗ ಹಾಕಿಕೊಂಡು ಬಂದು ಅಂಗಡಿಗೆ ಬಂದಿದ್ದರು. ವಿನಯ್ ಅವರ ಹಿರಿಯ ಸಹೋದರ ನಾಗರಾಜು ಬಾಬು ಅವರ ಮತ್ತೊಂದು ಮೆಡಿಕಲ್ ಅಂಗಡಿಯಲ್ಲಿ 10 ವರ್ಷದಿಂದ ನಂಬಿಕಸ್ಥ ನೌಕರನಾಗಿ ಕೆಲಸ ಮಾಡುತ್ತಿದ್ದ ಭರತ್ ಜ.18 ರಂದು ವಿನಯ್​ ಅವರ ಮನೆಯಲ್ಲಿ ಚಿನ್ನಾಭರಣ, ಹಣ ಕಳ್ಳತನ ಮಾಡಿ ಮೈಸೂರಿನಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ತನ್ನ ಪ್ರೇಯಸಿ ಕಾವ್ಯಗೆ ಕೊಟ್ಟು ಮಾರಾಟ ಮಾಡಿಸಲು ಪ್ರಯತ್ನಿದ್ದಾನೆ. ಇದಕ್ಕೆ ಭರತ್​ನ ಸ್ನೇಹಿತ ಲೋಹಿತ್ ಕುಮಾರ್ ಕೈ ಜೋಡಿಸಿದ್ದ ಕಾರಣ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 513 ಗ್ರಾಂ ಚಿನ್ನಾಭರಣ, 20 ಸಾವಿರ ನಗದು, ಒಂದು ಬೈಕ್, ಒಂದು ಮೊಬೈಲ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್ಪಿ ಹಾಗೂ ಎಎಎಸ್ಪಿ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ ಸೋಮೇಗೌಡ, ಸಿಪಿಐ ಕೃಷ್ಣಪ್ಪ, ಪಿ.ಎಸ್.ಐ ಮಹೇಶ್ ಕುಮಾರ್, ರಾಮಸ್ವಾಮಿ, ಸಿಬ್ಬಂದಿಗಳಾದ ಬಿಳಿಗೌಡ, ಶಿವಕುಮಾರ್, ಪ್ರಕಾಶ್, ವೆಂಕಟೇಶ್, ಕುಮಾರ್, ಸುನೀಲ್, ಸವಿರಾಜ್, ಅಮರೇಶ್, ಶಿವರಾಜ್, ಶಿವಪ್ರಸಾದ್ ನಾಯಕ, ರಾಧ, ಜ್ಯೋತಿ, ಯಶೋಧ, ಯಶೋಧಮ್ಮ, ರಾಜಣ್ಣ, ಶಂಕರ್ ಕಳವು ಪತ್ತೆ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಮಗಳ ಮದುವೆಗೆ ಖರೀದಿಸಿದ ಚಿನ್ನಾಭರಣ ಕಳವು: ಎರಡು ದಿನಗಳ ಹಿಂದೆ ಮಗಳ ಮದುವೆಗೆಂದು ಮಾಡಿಸಿಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಘಟನೆ ಇದೇ ಜಿಲ್ಲೆಯಲ್ಲಿ ನಡೆದಿತ್ತು. ಸುಮಾರು 15 ಲಕ್ಷ ರೂ ಮೌಲ್ಯದ ಆಭರಣವನ್ನು ಖದೀಮರು ಕದ್ದು ಪರಾರಿಯಾಗಿದ್ದರು. ನಗರದ ರಾಘವೇಂದ್ರ ಚಿತ್ರಮಂದಿರ ಬಳಿ ಇರುವ ಶೋಭಾ ಅವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನವನ್ನು ಕಳ್ಳತನ ಮಾಡಿ ಮನೆಯ ಮತ್ತೊಂದು ಬಾಗಿಲಿನಿಂದ ಪರಾರಿಯಾಗಿದ್ದರು.

ಮಗಳ‌ ಮದುವೆಗೆಂದು 2 ಜೊತೆ ಬಳೆ, 3 ನೆಕ್ಲೇಸ್, 30 ಜೊತೆ ಓಲೆ, 2 ಸರ, 10 ಉಂಗುರ ಹಾಗು ಮುಕ್ಕಾಲು ಕೆಜಿಯಷ್ಟು ಬೆಳ್ಳಿ ಸಾಮಗ್ರಿಗಳನ್ನು ಮನೆಯ ಬೀರುವಿನಲ್ಲಿಟ್ಟು ಆಲೂರಿಗೆ ತೆರಳಿದ್ದಾಗ ಖದೀಮರು ಕೃತ್ಯ ಎಸಗಿದ್ದಾರೆ.

ಇದನ್ನೂ ಓದಿ: ಮಗಳ ಮದುವೆಗೆ ಖರೀದಿಸಿಟ್ಟಿದ್ದ ₹15 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.