ETV Bharat / state

ಇರುವೆ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆ - ಕೆಲಸದಿಂದ ತೆಗೆದುಹಾಕುವ ಬೆದರಿಕೆ: ಇರುವೆ ಔಷದಿ ಸೇವಿಸಿದ ಅಂಗನವಾಡಿ ಕಾರ್ಯಕರ್ತೆ

ಫೋನ್ ಕರೆಗಳ ಮೂಲಕ ಸಾಕಷ್ಟು ದೂರು ಬರುತ್ತಿತ್ತು. ಆದ್ದರಿಂದ ಪರಿಶೀಲನೆಗಾಗಿ ಸೂಪರ್‌ ವೈಸರ್ ಕಳುಹಿಸಿದ್ದೆ. ಯಾವುದೇ ರೀತಿಯ ಕಿರುಕುಳ ಕೊಟ್ಟಿಲ್ಲ - ಸಿಡಿಪಿಒ

Threat of dismissal
ಕೆಲಸದಿಂದ ತೆಗೆದುಹಾಕುವ ಬೆದರಿಕೆ: ಇರುವೆ ಔಷದಿ ಸೇವಿಸಿದ ಅಂಗನವಾಡಿ ಕಾರ್ಯಕರ್ತೆ
author img

By

Published : Apr 11, 2022, 7:39 PM IST

ಚಾಮರಾಜನಗರ: ನೌಕರಿಯಿಂದ ತೆಗೆದುಹಾಕುವುದಾಗಿ ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಇರುವೆ ಕೊಲ್ಲುವ ಪೌಡರ್ ಸೇವಿಸಿರುವ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಜೀರಿಗೆಗದ್ದೆಯಲ್ಲಿ ನಡೆದಿದೆ. ಹನೂರು ತಾಲೂಕಿನ ಮಂಚಾಪುರ ಗ್ರಾಮದ‌ ಅಂಗನವಾಡಿ ಕಾರ್ಯಕರ್ತೆ ಮಮತಾ(52) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೆಲಸಕ್ಕೆ ಹಾಜರಾದರೂ ಗೈರು ಎನ್ನುವುದು, ನೌಕರಿಯಿಂದ ತೆಗೆದುಹಾಕುತ್ತೇನೆಂದು ಸಿಡಿಪಿಒ ನಾಗೇಶ್ ಹಾಗೂ ಸೂಪರ್ ವೈಸರ್ ಪೂರ್ಣಿಮಾ ಕಿರುಕುಳ ಕೊಡುತ್ತಿದ್ದಾರೆಂದು ಮಮತಾ ಆರೋಪಿಸಿದ್ದಾರೆ.‌

ಈಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಸಿಡಿಪಿಒ ಪ್ರತಿಕ್ರಿಯಿಸಿದ್ದು, ಫೋನ್ ಕರೆಗಳ ಮೂಲಕ ಸಾಕಷ್ಟು ದೂರು ಬರುತ್ತಿತ್ತು. ಆದ್ದರಿಂದ ಪರಿಶೀಲನೆಗಾಗಿ ಸೂಪರ್‌ ವೈಸರ್ ಕಳುಹಿಸಿದ್ದೆ. ಯಾವುದೇ ರೀತಿಯ ಕಿರುಕುಳ ಕೊಟ್ಟಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ನೆರೆ ಮನೆ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ, ಗರ್ಭಿಣಿ: ಕೇಸು ಮುಚ್ಚಿ ಹಾಕಲು ಪಂಚಾಯ್ತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.