ETV Bharat / state

ಚಾಮರಾಜನಗರ: ಈ ಅಂಗಡಿಯಲ್ಲಿ ಮಾಂಸ ಬೇಕೆನ್ನುವವರಿಗೆ ಥರ್ಮಲ್​ ಸ್ಕ್ರೀನಿಂಗ್ ಕಡ್ಡಾಯ! - Chamarajanagar

ಗುಂಡ್ಲುಪೇಟೆ ತಾಲೂಕಿನ‌ ಭೀಮನಬೀಡು ಗ್ರಾಮದ ಫಾತಿಮಾ ಆಯೇಷಾ ಚಿಕನ್ ಸೆಂಟರ್​ನ ಮಾಲೀಕ ಮಹಮ್ಮದ್ ಸುಲೇಮಾನ್ ಎಂಬುವರು ಮಾಂಸ ಕೊಳ್ಳಲು ತಮ್ಮ ಅಂಗಡಿಗೆ ಬರುವವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಿದ್ದು, ಸಾಮಾನ್ಯ ದೇಹ ತಾಪಮಾನ ಇದ್ದರೆ ಮಾಂಸ ನೀಡುತ್ತಾರೆ.‌

Chamarajanagar
ಥರ್ಮಲ್ ಸ್ಕ್ರೀನಿಂಗ್
author img

By

Published : Jul 6, 2020, 8:07 PM IST

ಚಾಮರಾಜನಗರ: ಮಾಂಸದಂಗಡಿಗಳಿಗೆ, ವೈನ್ ಸ್ಟೋರ್ ಮುಂಭಾಗ ಜನಜಂಗುಳಿ ಸೇರಿ ಸಾಮಾಜಿಕ ಅಂತರ ಮರೆತಿದ್ದ ಸಿಟಿ ಮಂದಿ ನಡುವೆ ಈ ಹಳ್ಳಿಯ ಮಾಂಸದಂಗಡಿ ಮಾಲೀಕ‌ ತನ್ನ ಅಂಗಡಿಗೆ ಬರುವ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸುವ ಮೂಲಕ ಆರೋಗ್ಯ ಪ್ರಜ್ಞೆ ಮೆರೆದಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ‌ ಭೀಮನಬೀಡು ಗ್ರಾಮದ ಫಾತಿಮಾ ಆಯೇಷಾ ಚಿಕನ್ ಸೆಂಟರ್​ನ ಮಾಲೀಕ ಮಹಮ್ಮದ್ ಸುಲೇಮಾನ್ ಎಂಬುವರು ಮಾಂಸ ಕೊಳ್ಳಲು ತಮ್ಮ ಅಂಗಡಿಗೆ ಬರುವವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಿದ್ದು, ಸಾಮಾನ್ಯ ದೇಹ ತಾಪಮಾನ ಇದ್ದರೆ ಮಾಂಸ ನೀಡುತ್ತಾರೆ.‌ ದೇಹದ ಉಷ್ಣಾಂಶ ಹೆಚ್ಚಿದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವ ಕೆಲಸ ಮಾಡಲಿದ್ದು, ಅದೃಷ್ಟವಶಾತ್ ಇಲ್ಲಿಯವರೆಗೆ ಅಧಿಕ ತಾಪಮಾನ ಇದ್ದವರು ಇವರ ಅಂಗಡಿಗೆ ಬಂದಿಲ್ಲ ಎಂದು ಈಟಿವಿ ಭಾರತಕ್ಕೆ ಗ್ರಾಮದ ಮಂಜು ಎಂಬುವರು ಮಾಹಿತಿ ನೀಡಿದ್ದಾರೆ.

ಕೋಳಿ ಇಲ್ಲವೇ ಕೋಳಿ ಮಾಂಸ ಕೊಳ್ಳಲು ಬರುವವರು ಸ್ಕ್ರೀನಿಂಗ್​ಗೆ ಒಳಗಾಗುವುದು ಕಡ್ಡಾಯ. ಇದಕ್ಕೆ ಒಪ್ಪಿದವರಿಗೆ ಮಾತ್ರ ಇವರು ಅಂಗಡಿ ಒಳಗೆ ಬಿಟ್ಟುಕೊಳ್ಳುತ್ತಾರೆ. ಜೊತೆಗೆ ಸಾಮಾಜಿಕ ಅಂತರ, ಮುಖಗವಸು ಹಾಕಿಕೊಳ್ಳುವುದನ್ನು ಇವರು ಕಡ್ಡಾಯಗೊಳಿಸುವ ಮೂಲಕ ಕೊರೊನಾ ವಾರಿಯರ್ ಆಗಿದ್ದಾರೆ. ಗ್ರಾಮದಲ್ಲಿ 5000ರಷ್ಟು ಜನಸಂಖ್ಯೆ ಇದ್ದು, ಎರಡು ಮಾಂಸದ ಅಂಗಡಿಗಳಿವೆ. ಏನಿಲ್ಲವೆಂದರೂ ದಿನವೊಂದಕ್ಕೆ 300-400 ಮಂದಿ ಮಾಂಸ ಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.