ETV Bharat / state

ಹಳ್ಳಿಗಳಿಗೂ ಕಾಲಿಟ್ಟ ಸರಗಳ್ಳರು: ಸೋಮಹಳ್ಳಿ, ಕೆಸ್ತೂರಿನಲ್ಲಿ ಸರ ಎಗರಿಸಿದ ಖದೀಮರು! - ಕುದೇರು ಪೊಲೀಸ್ ಠಾಣೆ

ನಗರ ಪ್ರದೇಶಗಳಲ್ಲಷ್ಟೆ ಕಾಣುತ್ತಿದ್ದ ಸರಗಳ್ಳತನ ಹಳ್ಳಿಗೂ ವ್ಯಾಪಿಸಿದ್ದು, ಹಾಡಹಗಲೇ ಜಿಲ್ಲೆಯ ಎರಡು ಕಡೆ ಸರಗಳ್ಳತನ ನಡೆದಿದೆ.

author img

By

Published : Aug 29, 2019, 11:12 PM IST

ಚಾಮರಾಜನಗರ: ನಗರ ಪ್ರದೇಶಗಳಲ್ಲಷ್ಟೆ ಕಾಣುತ್ತಿದ್ದ ಸರಗಳ್ಳತನ ಹಳ್ಳಿಗೂ ವ್ಯಾಪಿಸಿದ್ದು, ಹಾಡಹಗಲೇ ಜಿಲ್ಲೆಯ ಎರಡು ಕಡೆ ಸರಗಳ್ಳತನ ನಡೆದಿದೆ.

ನೀರು ಕೇಳುವ ನೆಪದಲ್ಲಿ ಮಹಿಳೆಯ ಸರ ಕಸಿದ ಘಟನೆ ತೆರಕಣಾಂಬಿ ಠಾಣಾ ವ್ಯಾಪ್ತಿಯ ಸೋಮಹಳ್ಳಿಯಲ್ಲಿ ನಡೆದಿದೆ‌. ಚಿಕ್ಕತಾಯಮ್ಮ(55) 30 ಗ್ರಾಂ ಸರ ಕಳೆದುಕೊಂಡ ಮಹಿಳೆ. ಗ್ರಾಮದಲ್ಲಿ ಚಿಕ್ಕತಾಯಮ್ಮ ಸಣ್ಣ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದು, ಬೈಕಿನಲ್ಲಿ ಬಂದ ಇಬ್ಬರು ನೀರು ಕೇಳಿದ್ದಾರೆ. ನೀರು ಕೊಡಲು ಮುಂದಾದಾಗ ಸರ ಕಸಿದು ಪರಾರಿಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಬೈಕಿನಲ್ಲಿ ಮಧ್ಯಾಹ್ನದ ವೇಳೆ ಅಡ್ಡಾಡುತ್ತಿದ್ದರು ಎಂದು ಗ್ರಾಮಸ್ಥರು ಈಟಿವಿ ಭಾರತಕ್ಕೆ ತಿಳಿಸಿದ್ದು, 2 ದಿನಗಳಿಂದ ಚಿಕ್ಕತಾಯಮ್ಮರ ಚಿಲ್ಲರೆ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿ ತಾವು ನಿಮ್ಮ ರೀತಿಯ ಸರವನ್ನೇ ಮಾಡಿಸಬೇಕು ಎಂದು ಸರದ ಬಗ್ಗೆ ಮಾಹಿತಿ ಪಡೆದಿದ್ದರು ಎನ್ನಲಾಗಿದೆ. ಸದ್ಯ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಸ್ತೂರಿನಲ್ಲೂ ಕೈಚಳಕ
ಕೆಸ್ತೂರಿನಲ್ಲಿ ಕುರಿ ಮೇಯಿಸುತ್ತಿದ್ದ ಜಯಮ್ಮ(33) ಎಂಬುವರಿಂದಲೂ ಸರ ಕಸಿದಿರುವ ಘಟನೆ ನಡೆದಿದೆ. ಲೋಳೆಸರ ಎಲ್ಲಿ ಸಿಗುತ್ತದೆ ಎಂದು ದಾರಿ ಕೇಳಿ ಆಕೆ ದಾರಿ ತೋರಿಸಲು ಮುಂದಾದಾಗ ಆಕೆಯ ವೇಲ್​ನಿಂದಲೇ ಬಾಯಿ ಕಟ್ಟಿ ತಾಳಿ, ಗುಂಡುಗಳನ್ನು ಕಸಿದು ಪರಾರಿಯಾಗಿದ್ದಾರೆ.

ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ಸರಗಳ್ಳತನ ನಡೆದಿರುವುದು ಆತಂಕಕಾರಿಯಾಗಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ.

Intro:ಹಳ್ಳಿಗಳಿಗೂ ಕಾಲಿಟ್ಟ ಸರಗಳ್ಳರು: ಸೋಮಹಳ್ಳಿ, ಕಸ್ತೂರಿನಲ್ಲಿ ಸರ ಕಿತ್ತ ಖದೀಮರು!

ಚಾಮರಾಜನಗರ: ನಗರ ಪ್ರದೇಶಗಳಲ್ಲಷ್ಟೆ ಕಾಣುತ್ತಿದ್ದ ಸರಗಳ್ಳತನ ಹಳ್ಳಿಗೂ ವ್ಯಾಪಿಸಿದ್ದು ಹಾಡಹಗಲೇ ಜಿಲ್ಕೆಯ ಎರಡು ಕಡೆ ಸರಗಳ್ಳತನ ನಡೆದಿದೆ.

Body:ನೀರು ಕೇಳುವ ನೆಪದಲ್ಲಿ ಮಹಿಳೆ ಸರ ಕಸಿದ ಘಟನೆ ತೆರಕಣಾಂಬಿ ಠಾಣಾ ವ್ಯಾಪ್ತಿಯ ಸೋಮಹಳ್ಳಿಯಲ್ಲಿ ನಡೆದಿದೆ‌. ಚಿಕ್ಕತಾಯಮ್ಮ(55) 30 ಗ್ರಾಂ
ಸರ ಕಳೆದುಕೊಂಡ ಮಹಿಳೆ. ಗ್ರಾಮದಲ್ಲಿ ಚಿಕ್ಕತಾಯಮ್ಮ ಸಣ್ಣ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದು ಬೈಕಿನಲ್ಲಿ ಬಂದ ಇಬ್ಬರು ನೀರು ಕೇಳಿದ್ದಾರೆ. ನೀರು ಕೊಡಲು ಮುಂದಾದಾಗ ಸರ ಕಸಿದು ಪರಾರಿಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಬೈಕಿನಲ್ಲಿ ಮಧ್ಯಾಹ್ನದ ವೇಳೆ ಅಡ್ಡಾಡುತ್ತಿದ್ದರು ಎಂದು ಗ್ರಾಮಸ್ಥರು ಈಟಿವಿ ಭಾರತಕ್ಕೆ ತಿಳಿಸಿದ್ದು ೨ ದಿನಗಳಿಂದ ಚಿಕ್ಕತಾಯಮ್ಮರ ಚಿಲ್ಲರೆ ಅಂಗಡಿಯಲ್ಲಿ ಸಿಗರೇಟ್ ಖರೀದಿಸಿ ತಾವು ನಿಮ್ಮ ರೀತಿಯ ಸರವನ್ನೇ ಮಾಡಿಸಬೇಕು ಎಂದು ಸರದ ಬಗ್ಗೆ ಮಾಹಿತಿ ಪಡೆದಿದ್ದರು ಎನ್ನಲಾಗಿದೆ. ಸದ್ಯ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಸ್ತೂರಿನಲ್ಲೂ ಕೈಚಳಕ: ಕಸ್ತೂರಿನಲ್ಲಿ ಕುರಿ ಮೇಯಿಸುತ್ತಿದ್ದ ಜಯಮ್ಮ(೩೩) ಎಂಬವರಿಂದಲೂ ಸರ ಕಸಿದಿರುವ ಘಟನೆ ನಡೆದಿದೆ.

ಲೋಳೆಸರ ಎಲ್ಲಿ ಸಿಗುತ್ತದೆ ಎಂದು ದಾರಿ ಕೇಳಿ ಆಕೆ ದಾರಿ ತೋರಿಸಲು ಮುಂದಾದಾಗ ಆಕೆಯ ವೇಲ್ ನಿಂದಲೇ ಬಾಯಿ ಕಟ್ಟಿ ತಾಳಿ, ಗುಂಡುಗಳನ್ನು ಕಸಿದು ಪರಾರಿಯಾಗಿದ್ದಾರೆ.

ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:ಗ್ರಾಮೀಣ ಭಾಗದಲ್ಲಿ ಸರಗಳ್ಳತನ ನಡೆದಿರುವುದು ಆತಂಕಕಾರಿಯಾಗಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆನ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.