ಚಾಮರಾಜನಗರ: ಒಂದೇ ರಾತ್ರಿ 4 ಮನೆಗಳಿಗೆ ಕನ್ನ ಹಾಕಲು ಗುಂಡ್ಲುಪೇಟೆಯ ಕೆಎಸ್ಎನ್ ಬಡಾವಣೆಯಲ್ಲೂ ವಿಫಲ ಯತ್ನ ನಡೆದ ಪ್ರಕರಣ ಕುರಿತಂತೆ ಪೊಲೀಸರು ಪರಾರಿಯಾದ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಶ್ವಿನಿ ಬಡಾವಣೆ, ಕೆಎಸ್ಎನ್ ಬಡಾವಣೆ ಸೇರಿದಂತೆ ಇನ್ನಿತರ ಬಡಾವಣೆಗಳಲ್ಲಿ ಪಿಎಸ್ಐ ಲತೇಶ್ ಕುಮಾರ್ ತಂಡ ತೆರಳಿ ನಾಗರಿಕರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ 2-3 ದಿನ ಮನೆಯಲ್ಲಿ ಇರದಿದ್ದರೇ ಬೀಟ್ ಪೊಲೀಸರ ಬದಲಾಗಿ ಠಾಣೆಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ. ಇನ್ನು, ಮನೆಗಳಿಗೆ ದೊಡ್ಡ ಬೀಗಗಳನ್ನು ಹಾಕುವ ಬದಲು ಇಂಟರ್ ಡೋರ್ ಲಾಕ್ ಬಳಸಿ, ಸಾಧ್ಯವಾದಷ್ಟು ಮನೆಗೆ ಸಿಸಿಟಿವಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಆನ್ ಲೈನ್ ಮನಿ ದೋಖಾದ ಬಗ್ಗೆಯೂ ಜನರು ಎಚ್ಚರ ವಹಿಸಬೇಕು, ಯಾವುದೇ ಬ್ಯಾಂಕಿನ ಹೆಸರು ಹೇಳಿಕೊಂಡು ಮಾಹಿತಿ ಕೇಳಿಕೊಂಡು ಫೋನ್ ಮಾಡಿದರೆ ಒಟಿಪಿ ನೀಡಬೇಡಿ, ಅಪರಿಚಿತರ ಮೇಲೆ ನಿಗಾ ಇಡಿ ಎಂದು ಅವರು ಮನವಿ ಮಾಡಿದ್ದಾರೆ.