ETV Bharat / state

ಬೊಮ್ಮಲಾಪುರದ ಯುಗಾದಿ ಬಲು ವಿಶಿಷ್ಟ.. ಬಣ್ಣದ ಓಕುಳಿಗೆ ಹುಲಿ, ಕರಡಿ ಸಾಥ್ - bear

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬಣ್ಣದ ಓಕುಳಿ ಜೊತೆಗೆ 3-4 ದಶಕದಿಂದ ಹುಲಿ, ಕರಡಿ, ಜೋಕರ್​​ಗಳು, ಮೋಡಿ ಮಾದರಿ, ಅಣಕು ಪಂಚಾಂಗ ಶ್ರವಣದ ವೇಷಧಾರಿಗಳು ಪ್ರತಿ ಮನೆ-ಮನೆಗೂ ತೆರಳಿ ದವಸ-ಧಾನ್ಯ ಇಲ್ಲವೇ ಹಣವನ್ನು ಪಡೆಯುವ ವಿಶಿಷ್ಟ ಆಚರಣೆ ಇದೆ.

ಯುಗಾದಿ ಆಚರಣೆ
author img

By

Published : Apr 7, 2019, 10:59 PM IST

ಚಾಮರಾಜನಗರ: ಜಿಲ್ಲೆಯ ಬಹುಪಾಲು ಗ್ರಾಮಗಳಲ್ಲಿ ಯುಗಾದಿಯ ವರ್ಷತೊಡಕಿನ ದಿನದಂದೇ ಹೋಳಿ(ಓಕುಳಿ) ಆಚರಣೆ ಮಾಡಲಿದ್ದು ಚಿಣ್ಣರು, ಹಿರಿಯರು, ಮಹಿಳೆಯರು ಸೇರಿದಂತೆ ವಯಸ್ಸಿನ ಬೇಧವಿಲ್ಲದೇ ಬಣ್ಣದ ಎರಚಾಟದಲ್ಲಿ ಮುಳಿಗೇಳುತ್ತಾರೆ.

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬಣ್ಣದ ಓಕುಳಿ ಜೊತೆಗೆ 3-4 ದಶಕದಿಂದ ಹುಲಿ, ಕರಡಿ, ಜೋಕರ್​​ಗಳು, ಮೋಡಿ ಮಾದರಿ, ಅಣಕು ಪಂಚಾಂಗ ಶ್ರವಣದ ವೇಷಧಾರಿಗಳು ಪ್ರತಿ ಮನೆ-ಮನೆಗೂ ತೆರಳಿ ದವಸ-ಧಾನ್ಯ ಇಲ್ಲವೇ ಹಣವನ್ನು ಪಡೆಯುವ ವಿಶಿಷ್ಟ ಆಚರಣೆ ಇದೆ.

ಯುಗಾದಿ ಆಚರಣೆ

ಕರಡಿ ವೇಷಧಾರಿಗಳು ಕಪ್ಪು ಬಣ್ಣ ಬಳಿದುಕೊಂಡು ಎತ್ತಿಗೆ ಕಟ್ಟುವ ಗೆಜ್ಜೆಗಳನ್ನು ಕಟ್ಟಿಕೊಂಡರೇ, ಹುಲಿ ವೇಷಧಾರಿಗಳು ಹಳದಿ-ಕಪ್ಪು ಬಣ್ಣಗಳ ಪಟ್ಟಿಗಳನ್ನು ಲೇಪಿಸಿಕೊಂಡು ಜನರ ಮುಂದೆ ವಿವಿಧ ಕಸರತ್ತುಗಳನ್ನು ಮಾಡುತ್ತಾರೆ.

ಪಾಳೇಗಾರರ ಯುದ್ಧ, ಪಂಚಾಂಗ ಶ್ರವಣದ ಅಣಕ, ಮೋಡಿ ವಿದ್ಯೆಯ ಅಣಕಗಳನ್ನು ಮಾಡುತ್ತಾರೆ. ಉಳಿದಂತೆ, ಪೊಲೀಸ್, ಕಳ್ಳ, ರಾಕ್ಷಸ, ಹನುಮ ಒಂಟಿ ವೇಷಧಾರಿಗಳು ಆಗಾಗ್ಗೆ ಗ್ರಾಮದಲ್ಲಿ ಪ್ರತ್ಯಕ್ಷರಾಗಿ ಹಣ ಕೀಳುತ್ತಾರೆ. ನೂತನ ಸಂವತ್ಸರವನ್ನು ಸಡಗರ-ಉತ್ಸಾಹದಿಂದ ಸ್ವಾಗತ ಕೋರುವ ಗ್ರಾಮಸ್ಥರು ಸಂಜೆ ರಾಮೇಶ್ವರನಿಗೆ ಪೂಜೆ ಸಲ್ಲಿಸಿ ಓಕುಳಿ ಆಡುತ್ತಾರೆ.

Ugadi in Bommasala

Intro:ಬೊಮ್ಮಲಾಪುರದ ಯುಗಾದಿ ಬಲು ವಿಶಿಷ್ಟ: ಬಣ್ಣದ ಓಕುಳಿಗೆ ಸಾಥ್ ನೀಡುತ್ತವೆ ಹುಲಿ, ಕರಡಿ

ಚಾಮರಾಜನಗರ: ಯುಗಾದಿ ಎಂದರೆ ಬೇವು-ಬೆಲ್ಲ, ಪಂಚಾಂಗ ಶ್ರವಣ. ಆದರೆ, ಈ ಊರಿನಲ್ಲಿ ಹುಲಿ,ಕರಡಿ ಸೇರಿದಂತೆ ವಿವಿದ ವೇಷಧಾರಿಗಳು, ಬಣ್ಣದ ಓಕುಳಿ ಕಣ್ಮನ ಸೆಳೆಯುತ್ತದೆ.

Body:
ಜಿಲ್ಲೆಯ ಬಹುಪಾಲು ಗ್ರಾಮಗಳಲ್ಲಿ ಯುಗಾದಿಯ ವರ್ಷದೊಡಕಿನ ದಿನದಂದೇ ಹೋಳಿ( ಓಕುಳಿ) ಆಚರಣೆ ಮಾಡಲಿದ್ದು ಚಿಣ್ಣರು, ಹಿರಿಯರು, ಮಹಿಳೆಯರು ಸೇರಿದಂತೆ ವಯಸ್ಸಿನ ಬೇಧವಿಲ್ಲದೇ ಬಣ್ಣದ ಎರಚಾಟದಲ್ಲಿ ಮುಳುಗೇಳುತ್ತಾರೆ.

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬಣ್ಣದ ಓಕುಳಿ ಜೊತೆಗೆ ೩-೪ ದಶಕದಿಂದ ಹುಲಿ, ಕರಡಿ, ಜೋಕರ್ ಗಳು, ಮೋಡಿ ಮಾದರಿ, ಅಣಕು ಪಂಚಾಂಗ ಶ್ರವಣದ ವೇಷಧಾರಿಗಳು ಪ್ರತಿ ಮನೆ-ಮನೆಗೂ ತೆರಳಿ ದವಸ-ಧಾನ್ಯ ಇಲ್ಲವೇ ಹಣವನ್ನು ಪಡೆಯುವ ವಿಶಿಷ್ಟ ಆಚರಣೆ ಇದೆ.

ಕರಡಿ ವೇಷದಾರಿಗಳು ಕಪ್ಪು ಬಣ್ಣ ಬಳಿದುಕೊಂಡು ಎತ್ತಿಗೆ ಕಟ್ಟುವ ಗೆಜ್ಜೆಗಳನ್ನು ಕಟ್ಟಿಕೊಂಡರೇ ಹುಲಿ ವೇಷಧಾರಿಗಳು ಹಳದಿ- ಕಪ್ಪು ಬಣ್ಣಗಳ ಪಟ್ಟೆಗಳನ್ನು ಲೇಪಿಸಿಕೊಂಡು ಜನರ ಮುಂದೆ ವಿವಿಧ ಕಸರತ್ತುಗಳನ್ನು ಮಾಡುತ್ತಾರೆ. ಪಾಳೇಗಾರರ ಯುದ್ಧ, ಪಂಚಾಂಗ ಶ್ರವಣದ ಅಣಕ, ಮೋಡಿ ವಿದ್ಯೆಯ ಅಣಕಗಳನ್ನು ಮಾಡುತ್ತಾರೆ. ಉಳಿದಂತೆ, ಪೊಲೀಸ್, ಕಳ್ಳ, ರಾಕ್ಷಸ, ಹನುಮ ಒಂಟಿ ವೇಷಧಾರಿಗಳು ಆಗಾಗ್ಗೆ ಗ್ರಾಮದಲ್ಲಿ ಪ್ರತ್ಯೇಕ್ಷರಾಗಿ ಹಣ ಕೀಳುತ್ತಾರೆ.

Conclusion:ನೂತನ ಸಂವತ್ಸರವನ್ನು ಸಡಗರ- ಉತ್ಸಾಹದಿಂದ ಸ್ವಾಗತ ಕೋರುವ ಗ್ರಾಮಸ್ಥರು ಸಂಜೆ ರಾಮೇಶ್ವರನಿಗೆ ಪೂಜೆ ಸಲ್ಲಿಸಿ ಓಕುಳಿ ಆಡುತ್ತಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.