ETV Bharat / state

ಸೌಲಭ್ಯ ಇಲ್ಲದಿದ್ದರೂ ಹೋಂ ಐಸೋಲೇಷನ್​ನಲ್ಲಿದ್ದವರ ಪತ್ತೆಗೆ ತಂಡ: ಸಚಿವ ಸುರೇಶ್ ಕುಮಾರ್

ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ಸೂಕ್ತ ಸೌಲಭ್ಯವಿಲ್ಲದಿದ್ದರೂ ಹೋಂ ಐಸೋಲೇಷನ್​ ಆಗಿರುವವರಿಂದಲೇ ಕೊರೊನಾ ಹೆಚ್ಚಾಗಿ ವ್ಯಾಪಿಸುತ್ತಿರುವುದು ಕಂಡು ಬಂದ ಹಿನ್ನೆಲೆ ಅವರ ಪತ್ತೆಗೆ ಕ್ರಮ ವಹಿಸಲಾಗುವುದು ಎಂದು ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದಾರೆ.

suresh
suresh
author img

By

Published : May 18, 2021, 4:16 PM IST

Updated : May 18, 2021, 9:40 PM IST

ಚಾಮರಾಜನಗರ: ಜಿಲ್ಲಾದ್ಯಂತ ಈಗಾಗಲೇ ಇರುವ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಒಟ್ಟು 2006 ಹಾಸಿಗೆ ಸಾಮರ್ಥ್ಯವಿದೆ. ಆದರೆ, ಕೇವಲ 400 ಮಂದಿಯಷ್ಟೇ ಇದ್ದು, ಹೋಂ ಐಸೋಲೇಷನ್ ನಲ್ಲಿ 3,842 ಸೋಂಕಿತರಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಕೋವಿಡ್ ನಿರ್ವಹಣೆಯ ಟಾಸ್ಕ್ ಫೋರ್ಸ್ ಸಭೆ ನಡೆಸಿದ ಬಳಿಕ ಅವರು ಮಾತನಾಡಿ, ನಗರ ಪ್ರದೇಶವೂ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಹೋಂ ಐಸೋಲೇಷನ್ ನಲ್ಲಿರಲು ಸೂಕ್ತ ವ್ಯವಸ್ಥೆ ಇಲ್ಲ. ಹೋಂ ಐಸೋಲೇಷನ್​ನಲ್ಲಿರುವವರಿಂದಲೇ ಸೋಂಕು ಹೆಚ್ಚಾಗುತ್ತಿರುವುದರಿಂದ, ಸೌಲಭ್ಯ ಇಲ್ಲದಿದ್ದರೂ ಹೋಂ ಐಸೋಲೇಷನ್ ಆಗಿರುವವರ ಪತ್ತೆಗೆ ತಹಶೀಲ್ದಾರ್, ಟಿಎಚ್ಒ ಸೇರಿದಂತೆ ತಂಡ ರಚಿಸಲಾಗಿದ್ದು, ಇನ್ನೆರೆಡು ದಿನಗಳಲ್ಲಿ ಸಮೀಕ್ಷೆ ನಡೆಸಿ ಅವೈಜ್ಞಾನಿಕವಾಗಿ ಹೋಂ ಐಸೋಲೇಷನ್ನಲ್ಲಿ ಇರುವವರನ್ನು ಕೇರ್ ಸೆಂಟರಿಗೆ ದಾಖಲಿಸಲಾಗುತ್ತದೆ ಎಂದು ವಿವರಿಸಿದರು.

ಸಚಿವ ಸುರೇಶ್ ಕುಮಾರ್

ಗ್ರಾಮೀಣ ಭಾಗದಲ್ಲಿನ ಸೋಂಕು ತಡೆಗಟ್ಟಲು ಹೆಚ್ಚು ಕ್ರಮ ಮತ್ತು ಹೆಚ್ಚಿನ ಒತ್ತು ನೀಡಲಾಗುತ್ತಿದೆ. 'ಕೊರೊನಾ ಮುಕ್ತ ಗ್ರಾಮ' ಎಂಬ ಆಂದೋಲನವನ್ನು ದೊಡ್ಡ ಮಟ್ಟದಲ್ಲಿ ಮಾಡಲು ತಯಾರಿ ನಡೆದಿದೆ‌. ಸೋಂಕಿತರನ್ನು ಸಿಸಿ ಸೆಂಟರಿಗೆ ಸೇರಿಸುವುದು ಸೇರಿ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸುವ ಗ್ರಾಪಂ ಪಿಡಿಒ, ಸದಸ್ಯರು ಆಂದೋಲನದ ಭಾಗವಾಗಿರುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಇನ್ನು, ಸೋಂಕಿತರ ಮನೆಗಳಿಗೆ ಭೇಟಿಗೆ ತೆರಳುವ ಆಶಾ ಕಾರ್ಯಕರ್ತೆಯರನ್ನು ಬೈಯ್ಯುವುದು, ಹೀಯಾಳಿಸುವುದು ಮಾಡುತ್ತಿರುವುದು ಕಂಡು ಬಂದಿರುವುದರಿಂದ ಆಶಾ ಕಾರ್ಯಕರ್ತೆಯರೊಟ್ಟಿಗೆ ಓರ್ವ ಹೋಂ ಗಾರ್ಡ್, ಓರ್ವ ಪೊಲೀಸ್ ಕಾನ್ಸ್​ಟೇಬಲ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

Last Updated : May 18, 2021, 9:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.