ETV Bharat / state

ಎತ್ತಿನ ಗಾಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಕ್ಕಿ-ಗೋಧಿ ವಿತರಿಸಿದ ಶಿಕ್ಷಕ

ಲಾಕ್​ಡೌನ್​ ಸಮಯದಲ್ಲೂ ಶಿಕ್ಷಕರೊಬ್ಬರು ಎತ್ತಿನ ಗಾಡಿ ಮೂಲಕ ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಕ್ಕಿ-ಗೋಧಿ ವಿತರಿಸಿ ಮಾದರಿಯಾಗಿದ್ದಾರೆ.

ಎತ್ತಿನ ಗಾಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಕ್ಕಿ-ಗೋಧಿ ವಿತರಿಸಿದ ಶಿಕ್ಷಕ
ಎತ್ತಿನ ಗಾಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಕ್ಕಿ-ಗೋಧಿ ವಿತರಿಸಿದ ಶಿಕ್ಷಕ
author img

By

Published : May 24, 2021, 4:50 PM IST

ಚಾಮರಾಜನಗರ: ಕೊರೊನಾ ಲಾಕ್​ಡೌನ್​ ಹಿನ್ನೆಲೆ ಬಿಸಿಯೂಟದ ಬದಲಿಗೆ ಅಕ್ಕಿ-ಗೋಧಿ ವಿತರಿಸಲು ಶಾಲಾ ಮುಖ್ಯಶಿಕ್ಷಕ ಎತ್ತಿನಗಾಡಿ ಮೊರೆ ಹೋಗಿದ್ದಾರೆ.

ಎತ್ತಿನ ಗಾಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಅಕ್ಕಿ-ಗೋಧಿ ವಿತರಿಸಿದ ಶಿಕ್ಷಕ

ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಹೊಂಗಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 111 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 49 ದಿನದ ಅವಧಿಯ ಅಕ್ಕಿ, ಗೋಧಿಯನ್ನು ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಕಾರಣದಿಂದ ಎತ್ತಿನಗಾಡಿ ಮೂಲಕ ಮನೆ-ಮನೆಗೆ ತೆರಳಿ ವಿತರಿಸುವ ಜೊತೆಗೆ ಮುಖ್ಯಶಿಕ್ಷಕ ಮಹಾದೇವಸ್ವಾಮಿ ಕೊರೊನಾ ಜಾಗೃತಿ ಮೂಡಿಸಿದ್ದಾರೆ.

ಪ್ಲಾಸ್ಟಿಕ್ ಕವರ್​ಗಳಲ್ಲಿ ಧಾನ್ಯ ವಿತರಿಸಲಾಗಿದ್ದು, ಅದನ್ನು ಪುನರ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಶಿಕ್ಷಕ ಮಹಾದೇವಸ್ವಾಮಿ ತಿಳಿಸಿದ್ದಾರೆ. ಬೆಳಗ್ಗೆ 7-9 ರ ಅವಧಿಯಲ್ಲಿ ಧಾನ್ಯಗಳನ್ನು ವಿತರಿಸುವ ಮೂಲಕ ಶಾಲಾ ಮುಖ್ಯಶಿಕ್ಷಕ ಗಮನಸೆಳೆದಿದ್ದು, ಇವರ ಕಾರ್ಯಕ್ಕೆ ಎಸ್​ಡಿಎಂಸಿ ಸದಸ್ಯರು ಸಾಥ್ ಕೊಟ್ಟಿದ್ದಾರೆ.

ಓದಿ:ಕೋವಿಡ್ ಮುಕ್ತ ಗ್ರಾಮಗಳಿಗೆ ಪ್ರಶಸ್ತಿ: ಸಚಿವ ಈಶ್ವರಪ್ಪ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.