ಚಾಮರಾಜನಗರ: ಮೊಬೈಲಿನಲ್ಲಿ RIP ME ಎಂದು ಸ್ಟೇಟಸ್ ಹಾಕಿಕೊಂಡು ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ರಘು (22) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಇಂದು ಈತ ವಾಟ್ಸ್ ಆ್ಯಪ್ ಸ್ಟೇಟಸ್ನಲ್ಲಿ RIP ME ಎಂದು ಬರೆದುಕೊಂಡಿದ್ದ. ಚಾಮರಾಜನಗರ-ಮೈಸೂರು ರೈಲಿಗೆ ಸಿಲುಕಿ ಸಾವಿಗೆ ಶರಣಾಗಿದ್ದಾನೆ. ಶವವನ್ನು ಸಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.
ಇದನ್ನೂ ಓದಿ : ಬಾಯಾರಿದ ಬಾಲಕಿ ನೀರೆಂದು ಸೀಮೆಎಣ್ಣೆ ಕುಡಿದು ಸಾವು