ETV Bharat / state

ಕಬ್ಬಳ್ಳಿಯಲ್ಲಿ 'ಸೂಫಿಯುಂ ಸುಜಾತಯುಂ' ಶೂಟಿಂಗ್: ಸೈಕಲ್ ಏರಿದ ಬೋಲ್ಡ್ ಬೆಡಗಿ ಹೈದರಿ - ಜಯಸೂರ್ಯ

ಮಲೆಯಾಳಂನ 'ಸೂಫಿಯುಂ ಸೂಜಾತಯುಂ' ಚಿತ್ರದ ಶೂಟಿಂಗ್ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯಲ್ಲಿ ನಡೆಯುತ್ತಿದೆ. ಶೂಟಿಂಗ್​ ನೋಡಲು ಅಕ್ಕಪಕ್ಕದ ಗ್ರಾಮದ ಜನರು ತಂಡೋಪತಂಡವಾಗಿ ಆಗಮಿಸುತ್ತಿರುವುದು ಸಾಮಾನ್ಯವಾಗಿತ್ತು.

Sufiyan sujata movie shooting
author img

By

Published : Sep 28, 2019, 6:38 AM IST

Updated : Sep 28, 2019, 8:18 AM IST

ಚಾಮರಾಜನಗರ: ಮಳಯಾಳಂನ 'ಸೂಫಿಯುಂ ಸೂಜಾತಯುಂ' ಚಿತ್ರದ ಶೂಟಿಂಗ್ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯಲ್ಲಿ ನಡೆಯುತ್ತಿದ್ದು, ಗ್ರಾಮದಲ್ಲಿ ಮಳಯಾಳಂ ಕಂಪು ಪಸರಿಸಿದೆ‌.

ಕಬ್ಬಳ್ಳಿಯಲ್ಲಿ ನಡೆಯುತ್ತಿರುವ ಸೂಫಿಯುಂ ಸುಜಾತಯುಂ ಶೂಟಿಂಗ್

ಗ್ರಾಮದಲ್ಲಿ ಮಸೀದಿ ಮತ್ತು ಬಸ್ ನಿಲ್ದಾಣದ ಸೆಟ್​ಗಳನ್ನು ಹಾಕಿರುವ ಚಿತ್ರತಂಡ ಹಾಡುಗಳ ಚಿತ್ರೀಕರಣದಲ್ಲಿ ನಿರತವಾಗಿದೆ. ಚಿತ್ರದಲ್ಲಿ ಜಯಸೂರ್ಯ ಆಕ್ಷನ್ ಚಿತ್ರಗಳ ಬಳಿಕ ಪ್ರೇಮಕಥೆ ಆಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ನಾಯಕಿಯಾಗಿ ಬೋಲ್ಡ್ ಬೆಡಗಿ ಅದಿತಿ ರಾವ್ ಹೈದರಿ ಕಾಣಿಸಿಕೊಂಡಿದ್ದಾರೆ.

Chamarajanagar
ನಟಿ ಅದಿತಿ ರಾವ್

ಚಿತ್ರದ ಶೂಟಿಂಗ್‌ ನೋಡಲು ಅಕ್ಕಪಕ್ಕದ ಗ್ರಾಮದ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದರು.

ಈ ಚಿತ್ರವನ್ನು ನರೈನ್ ಪೂಜ ನಿರ್ದೇಶಿಸುತ್ತಿದ್ದು, ವಿಜಯ್ ಬಾಬು ನಿರ್ಮಾಣ ಜವಾಬ್ದಾರಿ ಹೊತ್ತಿದ್ದಾರೆ. ಶನಿವಾರ ಇಲ್ಲವೇ ಭಾನುವಾರದಿಂದ ಕೋಜಿಕೋಡ್​ನಲ್ಲಿ ಹಾಡಿನ ಇನ್ನುಳಿದ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ.

Intro:ಕಬ್ಬಳ್ಳಿಯಲ್ಲಿ ಸೂಫಿಯುಂ ಸುಜಾತಯುಂ ಶೂಟಿಂಗ್: ಸೈಕಲ್ ಏರಿದ ಬೋಲ್ಡ್ ಬೆಡಗಿ ಹೈದರಿ

ಚಾಮರಾಜನಗರ: ಮಳಯಾಳಂನ ಸೂಫಿಯುಂ ಸೂಜಾತಯುಂ ಚಿತ್ರದ ಶೂಟಿಂಗ್ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿಯಲ್ಲಿ ನಡೆಯುತ್ತಿದ್ದು ಮಳೆಯಾಳಂ ಕಂಪು ಪಸರಿಸಿದೆ‌.

Body:ಮಸೀದಿಮತ್ತು ಬಸ್ ನಿಲ್ದಾಣದ ಸೆಟ್ ಗಳನ್ನು ಹಾಕಿರುವ ಚಿತ್ರತಂಡ ಹಾಡುಗಳ ಚಿತ್ರೀಕರಣ ಮಾಡುತ್ತಿದೆ. ಆಕ್ಷನ್ ಚಿತ್ರಗಳ ಬಳಿಕ ಜಯಸೂರ್ಯ ಪ್ರೇಮಕಥೆಯ ನಾಯಕರಾಗಿದ್ದು ಬೋಲ್ಡ್ ಬೆಡಗಿ ಅದಿತಿ ರಾವ್ ಹೈದರಿ ನಾಯಕಿಯಾಗಿದ್ದಾರೆ.

ಸೈಕಲ್ ಹೊಡೆಯುವ, ಮಾರುಕಟ್ಟೆ ಮುಂದೆ ಸಾಗುವ ಹಾಗೂ ಮಂದಿರ ಮುಂದೆ ನಿಂತು ಹೂವು ಕೊಳ್ಳುವ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು ಅಕ್ಕಪಕ್ಜದ ಊರಿನ ಮಂದಿ ಸಿನಿಮಾ ಶೂಟಿಂಗ್ ನೋಡಲು ತಂಡೋಪತಂಡವಾಗಿ ಜನ ಆಗಮಿಸುತ್ತಿದುದು ಸಾಮಾನ್ಯವಾಗಿತ್ತು.

Conclusion:ಚಿತ್ರವನ್ನು ನರೈನ್ ಪುಜ ನಿರ್ದೇಶಿಸುತ್ತಿದ್ದು, ವಿಜಯ್ ಬಾಬು ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ. ಶನಿವಾರ ಇಲ್ಲವೇ ಭಾನುವಾರದಿಂದ ಕೋಜಿಕೋಡ್ ನಲ್ಲಿ ಇನ್ನುಳಿದ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
Last Updated : Sep 28, 2019, 8:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.