ಚಾಮರಾಜನಗರ : ವಾರ್ಷಿಕ ಶುಲ್ಕ ಒಂದೇ ಬಾರಿ ಪಾವತಿ ಮಾಡದಕ್ಕೆ ವಿದ್ಯಾರ್ಥಿಯನ್ನು ಆನ್ಲೈನ್ ತರಗತಿಯಿಂದ ಹೊರಗಿಟ್ಟಿರುವ ಘಟನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಉಸ್ತುವಾರಿಯಾಗಿರೋ ಜಿಲ್ಲೆಯಲ್ಲೇ ನಡೆದಿದೆ.
ನಗರದ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಯಶಸ್ ಎಂ. ಎಂಬ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗಿಟ್ಟು, ಆರ್ಟಿಐ ಕಾಯ್ದೆಯ 21 (ಎ) ಅನ್ನು ಸಂಪೂರ್ಣ ಉಲ್ಲಂಘಿಸಿದ್ದಾರೆಂದು ಯಶಸ್ನ ತಂದೆ ಕುರುಬರಹುಂಡಿಯ ಮಹೇಶ್ ಆರೋಪಿಸಿದ್ದಾರೆ.
ಈ ಕುರಿತು ಇಂದು ಜಿಲ್ಲೆಗೆ ಬಂದಿದ್ದ ಸಚಿವರ ಗಮನಕ್ಕೂ ತಂದಿದ್ದಾರೆ. ಸಚಿವರು ಸಮಸ್ಯೆ ಪರಿಹರಿಸುವಂತೆ ಡಿಡಿಪಿಐಗೆ ಸೂಚಿಸಿದ್ದಾರೆ.