ಚಾಮರಾಜನಗರ: ಸಾವು ಯಾವಾಗ, ಎಲ್ಲಿ, ಹೇಗಾದರೂ ಬರಬಹುದು ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ. ರಸ್ತೆ ದಾಟುವಾಗ ರಸ್ತೆ ವಿಭಜಕದ ನಡುವೆಯೇ ಅಪರಿಚಿತನೋರ್ವ ಪ್ರಾಣ ಬಿಟ್ಟಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಪಟ್ಟಣದ ಅಚ್ಗಾಲ್ ಸಮೀಪದ ಮುಖ್ಯರಸ್ತೆಯ ವಿಭಜಕದ ಮೇಲೆ ಸುಮಾರು 55 ವರ್ಷದ ವ್ಯಕ್ತಿ ಮಾಸ್ಕ್ ಧಾರಿಯಾಗಿ ಸಾವನ್ನಪ್ಪಿದ್ದಾನೆ. ಮೃತನು ಹಲವಾರು ದಿನಗಳಿಂದ ಬಸ್‌ನಿಲ್ದಾಣ ಹಾಗೂ ಇತರೆ ಕಡೆಗ ಅಲೆದಾಡುತ್ತಿದ್ದ. ಆಹಾರವಿಲ್ಲದೆಯೋ ಅಥವಾ ಯಾವುದೋ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಓದಿ:ಕೌಟುಂಬಿಕ ಕಲಹ ಹಿನ್ನೆಲೆ: ಪತಿಯಿಂದ ಪತ್ನಿಯ ಕೊಲೆ
ಪೊಲೀಸರು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ವಾರಸುದಾರರ ಪತ್ತೆಗೆ ಮುಂದಾಗಿದ್ದಾರೆ.