ಚಾಮರಾಜನಗರ: ಗಣೇಶನ ಮೂರ್ತಿ ನಿಮಜ್ಜನ ವೇಳೆ ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಕಲ್ಲೆಸೆದ ಘಟನೆ ಚಾಮರಾಜನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಪಿಎಸ್ಐ ಮಹಾದೇವ್ ಎಂಬವರು ಗಾಯಗೊಂಡಿದ್ದಾರೆ.
ಸಂತೇಮರಹಳ್ಳಿ ವೃತ್ತದ ಸಮೀಪ ಇರುವ ಗಣಪತಿಯನ್ನು ಭಾನುವಾರ ನಿಮಜ್ಜನ ಮಾಡಲಾಗುತ್ತಿತ್ತು, ರಾತ್ರಿ 11 ಗಂಟೆ ಆದರೂ ಡಿಜೆ ಆಫ್ ಮಾಡದೇ ಮೆರವಣಿಗೆಯಲ್ಲಿ ಕುಣಿಯುತ್ತಿದ್ದರಿಂದ ಪೊಲೀಸರು ಡಿಜೆ ಆಫ್ ಮಾಡಿ ಎಂದಿದ್ದಾರೆ.
ಇದರಿಂದ ಕುಪಿತಗೊಂಡ ಮಹೇಂದ್ರ, ನಾಗೇಶ, ಮಹೇಶ್, ಮುರುಗೇಶ್ ಸೇರಿದಂತೆ 15ಕ್ಕೂ ಹೆಚ್ಚು ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಪಿಎಸ್ಐ ಅವರಿಗೆ ತೀವ್ರತರ ಗಾಯಗಳಾಗಿದ್ದರೆ, ಎಎಸ್ಐ ಶಿವಶಂಕರ್, ಚಾಲಕ ಬಸವರಾಜು ಎಂಬುವರ ಕಾಲು, ಕೈಗಳಿಗೆ ಗಾಯಗಳಾಗಿದೆ.
ಘಟನೆ ಸಂಬಂಧ ಎಎಸ್ಐ ಶಿವಶಂಕರ್ ದೂರು ನೀಡಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತುಮಕೂರು ಗಣೇಶೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ವ್ಯಕ್ತಿ ಸಾವು