ಚಾಮರಾಜನಗರ : ಇನ್ನು ಕೂಡ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲ. ಪರಿಸ್ಥಿತಿ ಸುಧಾರಿಸಿಲ್ಲ ಎಂದು ಸಚಿವ ಸುರೇಶಕುಮಾರ್ ತಿಳಿಸಿದರು.
ಗುಂಡ್ಲುಪೇಟೆ ಆಸ್ಪತ್ರೆಗೆ ಭೇಟಿಯಿತ್ತು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಜನರನ್ನು ಹೋಂ ಐಸೋಲೇಷನ್‌ಗೆ ಕಳುಹಿಸಬಾರದೆಂದು ಇಡೀ ರಾಜ್ಯಾದ್ಯಂತ ಕ್ರಮ ತೆಗೆದುಕೊಳ್ಳಲಾಗಿದೆ.
ಕೆಲ ದಿನಗಳಿಂದ ಮರಣ ಪ್ರಮಾಣ ಕಡಿಮೆಯಾಗಿದ್ದು, ಪಾಸಿಟಿವಿಟ್ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ತಿಳಿಸಿದರು. 36 ಮಂದಿ ಕುಟುಂಬಕ್ಕೆ ಆಕ್ಸಿಜನ್ ದುರಂತದ ಪರಿಹಾರ ಕೊಡಬೇಕೆಂಬ ವಿಪಕ್ಷಗಳ ಒತ್ತಾಯಕ್ಕೆ ಅವರು ಪ್ರತಿಕ್ರಿಯಿಸಿ, ಹೈಕೋರ್ಟ್‌ಗೆ ಏನು ಪಟ್ಟಿ ಕೊಡಲಾಗಿದೆ, ಅದರಂತೆ ಪರಿಹಾರ ಹಣ ಮಂಜೂರಾಗಿದೆ.
ಇನ್ನು, ವಿಚಾರಣೆ ಹಂತದಲ್ಲಿದೆ ಎಂದಷ್ಟೇ ಹೇಳಿದರು. ದುರಂತಕ್ಕೆ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದು ಸಚಿವ ಸುರೇಶ್‌ಕುಮಾರ್ ಹೇಳಿದರು.