ETV Bharat / state

ಚಾಮರಾಜನಗರ: ವನ್ಯಜೀವಿ ಕುರಿತಾದ ರಾಜ್ಯ ಮಟ್ಟದ ಮಾಧ್ಯಮ ಕಾರ್ಯಾಗಾರ - ಅಜಯ್ ಮಿಶ್ರಾ

ಆನೆಗಳು ಜನವಸತಿ ಪ್ರದೇಶದತ್ತ ಏಕಾಏಕಿ ತೆರಳುವುದರ ಹಿಂದೆ ಅನೇಕ ಕಾರಣಗಳು ಇರುತ್ತವೆ. ಹುಲಿ ಹಾಗೂ ಚಿರತೆಗಳು ಆನೆ ಮರಿಗಳನ್ನು ಬೇಟೆಯಾಡುವುದು ಸರ್ವೇ ಸಾಮಾನ್ಯ. ಈ ಕಾರಣಕ್ಕೂ ಕೂಡ ಆನೆಗಳು ತಮ್ಮ ಮರಿಗಳ ಸಂರಕ್ಷಣೆಗೆ ಜನವಸತಿ ಪ್ರದೇಶದ ಕಡೆಗೆ ಕೆಲವೊಮ್ಮೆ ತೆರಳುತ್ತವೆ ಎಂದು ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕರಾದ ಅಜಯ್ ಮಿಶ್ರಾ ತಿಳಿಸಿದರು.

ರಾಜ್ಯ ಮಟ್ಟದ ಮಾಧ್ಯಮ ಕಾರ್ಯಾಗಾರ
ರಾಜ್ಯ ಮಟ್ಟದ ಮಾಧ್ಯಮ ಕಾರ್ಯಾಗಾರ
author img

By

Published : Dec 16, 2020, 5:54 PM IST

ಚಾಮರಾಜನಗರ: ಹುಲಿ, ಚಿರತೆಗಳಿಂದ ತಮ್ಮ ಮರಿಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಕೆಲವೊಮ್ಮೆ ಆನೆಗಳು ಕಾಡನ್ನು ಬಿಟ್ಟು ಜನವಸತಿ ಪ್ರದೇಶದತ್ತ ತೆರಳುತ್ತವೆ ಎಂದು ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕರಾದ ಅಜಯ್ ಮಿಶ್ರಾ ತಿಳಿಸಿದರು.

ವನ್ಯಜೀವಿ ಕುರಿತ ರಾಜ್ಯ ಮಟ್ಟದ ಮಾಧ್ಯಮ ಕಾರ್ಯಾಗಾರ

ಚಾಮರಾಜನಗರದ ಕೆ ಗುಡಿಯಲ್ಲಿ ನಡೆದ ವನ್ಯಜೀವಿ ಕುರಿತಾದ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆನೆಗಳು ಜನವಸತಿ ಪ್ರದೇಶದತ್ತ ಏಕಾಏಕಿ ತೆರಳುವುದರ ಹಿಂದೆ ಕೇವಲ ಆಹಾರ ಅರಸುವುದು ಮಾತ್ರ ಇರುವುದಿಲ್ಲ. ಬದಲಾಗಿ ಇನ್ನೂ ಅನೇಕ ಕಾರಣಗಳು ಇರುತ್ತವೆ. ಹುಲಿ ಹಾಗೂ ಚಿರತೆಗಳು ಆನೆ ಮರಿಗಳನ್ನು ಬೇಟೆಯಾಡುವುದು ಸರ್ವೇ ಸಾಮಾನ್ಯ. ಈ ಕಾರಣಕ್ಕೂ ಕೂಡ ಆನೆಗಳು ತಮ್ಮ ಮರಿಗಳ ಸಂರಕ್ಷಣೆಗೆ ಜನವಸತಿ ಪ್ರದೇಶದ ಕಡೆಗೆ ಕೆಲವೊಮ್ಮೆ ತೆರಳುತ್ತವೆ ಎಂದು ವಿವರಿಸಿದರು.

ಕಳೆದ 30 ವರ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಒಂದೆಡೆ ಜನಸಂಖ್ಯೆಯು ಹೆಚ್ಚಾಗುತ್ತಿದೆ. ಇನ್ನೊಂದೆಡೆ ದಿನದಿಂದ ದಿನಕ್ಕೆ ಅರಣ್ಯ ಪ್ರದೇಶ ದೊಡ್ಡಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ವನ್ಯಜೀವಿಗಳ ಹತ್ಯೆಯನ್ನು ತಡೆಯುವಲ್ಲಿ ಅರಣ್ಯ ಇಲಾಖೆ ಸಾಕಷ್ಟು ಯಶಸ್ಸು ಗಳಿಸಿದೆ. ಜೊತೆಗೆ ಜನರಿಗೂ ಒಂದಿಷ್ಟು ಅರಿವು ಮೂಡಿದೆ. ಸ್ವಾತಂತ್ರ್ಯ ನಂತರ ಸಾಕಷ್ಟು ಪ್ರಾಣಿಗಳನ್ನು ಹತ್ಯೆ ಮಾಡಲಾಯಿತು. ಕೆಲವನ್ನು ವಿಷ ಹಾಕಿ ಸಾಯಿಸಲಾಯಿತು. ಆದರೆ ಈಗ ನಿರಂತರ ಪ್ರಯತ್ನ, ಸಿಬ್ಬಂದಿ ತಪಾಸಣೆ ಮೂಲಕ ಪ್ರಾಣಿ ಹತ್ಯೆ ತಡೆಯಲಾಗಿದೆ. ಆನೆಗಳು ವಾಸಿಸುವ, ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶದಲ್ಲಿ ಕೃಷಿಕರು ತಾವು ಬೆಳೆಯುವ ಬೆಳೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕು. ರೈತರನ್ನು ಹಂತಹಂತವಾಗಿ ಮನವೊಲಿಸುವ ಕಾರ್ಯ ಮಾಡಬೇಕಿದೆ ಎಂದರು.

ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಕಳೆದ 10 ವರ್ಷದಲ್ಲಿ ಸಾಕಷ್ಟು ಉತ್ತೇಜನ ಸಿಕ್ಕಿದೆ. ಆನೆ ಬುದ್ಧಿವಂತ ಪ್ರಾಣಿ, ಜನವಸತಿ ಪ್ರದೇಶ ಹಾಗೂ ರೈತರ ಬೆಳೆ ನಾಶ ತಡೆಯುವ ಸಲುವಾಗಿ ಅಲ್ಲಲ್ಲಿ ದೊಡ್ಡ ಕಾಲುವೆ ತೆಗೆದಿದ್ದೇವೆ. ಬಂಡೆ ಬಂದ ಕಡೆ ಫೆನ್ಸಿಂಗ್ ಮಾಡಿದ್ದೇವೆ. ಅಲ್ಲಲ್ಲಿ ಗೋಡೆ ನಿರ್ಮಿಸಿದ್ದೇವೆ. ಆದರೆ ಸಾಕಷ್ಟು ಕಡೆ ಆನೆಗಳು ಇದನ್ನು ಬೇಧಿಸಿ ತೆರಳುತ್ತವೆ. ಆನೆ ಮಾರ್ಗ ಸಾಕಷ್ಟು ಬದಲಾಗುತ್ತದೆ. ಬ್ಯಾರಿಯರ್​ಗಳನ್ನು ವಿಶಿಷ್ಟವಾಗಿ ನಿರ್ಮಿಸಬೇಕಿದೆ. ಸಾಕಷ್ಟು ಆರ್ಥಿಕ ಹೊರೆ ಇಲಾಖೆಯ ಮೇಲಿದೆ. ಸೂಕ್ತ ಕ್ರಮ ಕೈಗೊಳ್ಳುವ ಜತೆಗೆ ಜನರಿಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ. ಜನರ ಸಹಕಾರ ಬೇಕು. ಜನರಿಗೆ ಎದುರಾಗುವ ಸಮಸ್ಯೆ ನಿವಾರಣೆಗೂ ಶ್ರಮಿಸಬೇಕು, ಪ್ರಾಣಿಗಳಿಂದಾಗುವ ನಷ್ಟ ಪರಿಹಾರಕ್ಕೂ ಕ್ರಮ ಕೈಗೊಂಡಿದ್ದೇವೆ ಎಂದರು.

ಸ್ಥಳೀಯರಿಗೆ ಸಹಕಾರ: ಸ್ಥಳೀಯ ನಾಗರಿಕರಿಗೆ ಜೇನುಗೂಡು ನೀಡುವ ಕಾರ್ಯ ಮಾಡಿದ್ದೇವೆ. ಅರಣ್ಯ ಇಲಾಖೆ ಇಲ್ಲಿನ ಜನರ ಜತೆ ಉತ್ತಮ ಸಂಪರ್ಕ ಹೊಂದಿದೆ. ಮೈಸೂರಿನಿಂದ ದಾಂಡೆಲಿವರೆಗೆ ಆನೆಗಳು ಓಡಾಡಿಕೊಂಡಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ರಸ್ತೆ, ಸರೋವರ, ನದಿ, ಅಣೆಕಟ್ಟು ಇತ್ಯಾದಿ ಬಂದಿವೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಜನರ ನಡವಳಿಕೆಯಿಂದಲೂ ಸಮಸ್ಯೆ ಆಗುತ್ತಿದೆ. ಆದ್ದರಿಂದ ಇಲಾಖೆ ದೊಡ್ಡ ಮಟ್ಟದಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ ಎಂದು ವಿವರಿಸಿದರು.

ಈ ವೇಳೆ ಚಾಮರಾಜನಗರ ಎಸಿಎಫ್ ಸಂದೀಪ್ ಸೂರ್ಯವಂಶಿ, ಅರಣ್ಯ ಇಲಾಖೆ ಅಧಿಕಾರಿಗಳಾದ ಕಾರ್ತಿಕ್ ಕುಲಕರ್ಣಿ, ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್, ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ನಾಗೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.