ಚಾಮರಾಜನಗರ: ಸಾವಿರಾರು ವರ್ಷಗಳ ಇತಿಹಾಸ ಇರುವ ಕಾರಾಪುರ ವಿರಕ್ತಮಠಕ್ಕೆ ಉತ್ತರಾಧಿಕಾರಿಯಾಗಿ ಚಾಮರಾಜನಗರ ಮರಿಯಾಲ ಮಠದ 10ನೇ ತರಗತಿ ವಿದ್ಯಾರ್ಥಿಯನ್ನು ನೇಮಕ ಮಾಡಲಾಗಿದೆ.
ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ದೊರೆಸ್ವಾಮಿ ಹಾಗೂ ಶೀಲಾ ದಂಪತಿ ಪುತ್ರ ಸಾಗರ್ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ಸಂಬಂಧ ಗುರುವಾರ ಪಟ್ಟಣದ ಕಾರಾಪುರ ವಿರಕ್ತ ಮಠದಲ್ಲಿ ಮಠಾಧೀಶರಾದ ಬಸವಲಿಂಗ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸನ್ಯಾಸ ದೀಕ್ಷೆ ಹಾಗೂ ಪಟ್ಟಾಧಿಕಾರ ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕ್ರಿ.ಶ. 1010ರ ಐತಿಹ್ಯ ಈ ಮಠಕ್ಕಿದೆ. ಸುಖಿ ಬಸವರಾಜೇಂದ್ರಸ್ವಾಮಿ ಒಡೆಯರ್ ಇಲ್ಲಿನ ಪ್ರಥಮ ಮಠಾಧ್ಯಕ್ಷರಾಗಿದ್ದು, ಮಲೆ ಮಹದೇಶ್ವರರು ಇಲ್ಲಿಗೆ ಭೇಟಿ ನೀಡಿ ಧ್ಯಾನ ಮಾಡಿದ್ದರು ಎಂಬ ಇತಿಹಾಸ ಈ ಮಠಕ್ಕಿದೆ. ಮಠಾಧ್ಯಕ್ಷರ ಆಯ್ಕೆಯಲ್ಲಿ ಗುರು ಪರಂಪರೆಯನ್ನು ಹೊಂದಿರುವ ಇದಕ್ಕೆ 16ನೇ ಮಠಾಧ್ಯಕ್ಷರಾಗಿ ಸಾಗರ್ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ ಎಂದು ಬಸವಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ ದುರಂತ: ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಸಂಸ್ಥೆ