ಕೊಳ್ಳೇಗಾಲ: ಮೊಬೈಲ್ ಹೆಚ್ಚು ಬಳಸಬೇಡ. ಓದಿನ ಕಡೆ ಗಮನ ಹರಿಸು ಎಂಬ ಪೋಷಕರ ಬುದ್ಧಿ ಮಾತಿಗೆ ಮನನೊಂದ ಬಾಲಕಿಯೋರ್ವಳು ನೇಣಿಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ದೇವಾಂಗಪೇಟೆಯ ಚೌಡೇಶ್ವರಿ ಗುಡಿ ಬೀದಿಯ ನಿವಾಸಿ ಲೋಕೇಶ್ ಎಂಬುವರ ಪುತ್ರಿ ದರ್ಶಿನಿ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಎಸ್ಎಸ್ಎಲ್ಸಿ ಪರೀಕ್ಷೆಗೆ ಹತ್ತಿರವಾಗುತಿದೆ. ಓದಿಕೊಳ್ಳದೇ ಬಿಟ್ಟು ಬರೀ ಮೊಬೈಲ್ ಹಿಡಿದುಕೊಂಡಿದ್ದೀಯ? ಓದಿಕೋ ಎಂದು ತಿಳಿ ಹೇಳಿದಕ್ಕೆ ಮನನೊಂದ ಬಾಲಕಿ ದರ್ಶಿನಿ ಮನೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತ್ತದೇಹವನ್ನು ಅವರ ವಾರಸುದಾರರಿಗೆ ಒಪ್ಪಿಸಿದ್ದಾರೆ.