ಚಾಮರಾಜನಗರ: ಧರ್ಮ-ಧರ್ಮಗಳ ನಡುವೆ ಏಳುವ ಅಸಹಿಷ್ಟುತೆ ಗೋಡೆಗಳು ಆಗಾಗ್ಗೆ ಕಾಣಿಸುವ ಈ ಕಾಲಘಟ್ಟದಲ್ಲಿ ಮಸೀದಿ ಮುಂದೆ ಮಾರಮ್ಮನ ಕೊಂಡ ಹಾಯುವ ವಿಶಿಷ್ಟ ಸಾಮರಸ್ಯದ ಉತ್ಸವ ಗಡಿಭಾಗ ತಾಳವಾಡಿಯಲ್ಲಿ ನಡೆಯಿತು.
ತಾಳವಾಡಿ ತಮಿಳುನಾಡಿಗೆ ಒಳಪಟ್ಟರೂ ಬಹುಪಾಲು ಮಂದಿ ಕನ್ನಡಿಗರೇ ಇದ್ದಾರೆ. ಪಟ್ಟಣದ ಹೃದಯಭಾಗದಲ್ಲಿನ ಮಾರಮ್ಮ ದೇಗುಲ ಮತ್ತು ಮಸೀದಿ ಒಂದೇ ಸ್ಥಳದಲ್ಲಿವೆ. ಈ ಮಸೀದಿ ಟಿಪ್ಪು ಆಡಾಳಿತಾವಧಿಯಲ್ಲಿ ನಿರ್ಮಾಣಗೊಂಡಿದೆ.
ಜಾತ್ರೆಯ ಬೆಳಗಿನ ಸಮಯ ಮಾರಮ್ಮನ ದೇಗುಲದಲ್ಲಿ ಘಂಟನಾದ, ಮಂತ್ರೋಚ್ಛಾರ ನಡೆದರೇ ಮಸೀದಿಯಲ್ಲಿ ಪ್ರಾರ್ಥನೆ ಮೊಳಗುತ್ತದೆ. ಮುಸ್ಲಿಂ ಸಮುದಾಯದ ಜನರು ಕೊಂಡೋತ್ಸವ ಕಣ್ತುಂಬಿಕೊಂಡು ಸಾಮರಸ್ಯದ ಹಬ್ಬವೆಂದು ಮುದ್ರೆ ಒತ್ತುತ್ತಾರೆ.