ಚಾಮರಾಜನಗರ : ನಾಲ್ಕು ದಿನಗಳ ಸಂಪೂರ್ಣ ಲಾಕ್ಡೌನ್ ಬಳಿಕ ಇಂದು ಅಗತ್ಯ ವಸ್ತುಗಳನ್ನು ಕೊಳ್ಳಲು ಎಂದಿನಂತೆ ಜನರು ಮುಗಿಬಿದ್ದರು.
ಆದರೆ, ಚಿಕ್ಕಂಗಡಿ, ದೊಡ್ಡಂಗಡಿ ಬೀದಿಗಳ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರಿಂದ ಜನರು ನಡೆದೇ ಮಾರುಕಟ್ಟೆಗಳಿಗೆ ಬರಬೇಕಾಯಿತು.
ಬೀದಿಬದಿ ವ್ಯಾಪಾರ ಸ್ಥಳಾಂತರಗೊಂಡಿದ್ದರೂ ಕೂಡ ಸಾಮಾಜಿಕ ಅಂತರ ಇರದಿರುವುದು ಸಾಮಾನ್ಯವಾಗಿತ್ತು. ಕನಿಷ್ಠ ಎರಡಡಿ ಅಂತರವೂ ಇಲ್ಲದಂತೆ ಜನರು ವ್ಯಾಪಾರ-ವ್ಯವಹಾರ ನಡೆಸುತ್ತಿದ್ದರು.
ಎಂದಿನಂತೆ ಕೆಲವರು ಮಾಸ್ಕ್ ಗಲ್ಲಕ್ಕಿಳಿಸಿ ಅಸಡ್ಡೆ ತೋರಿದರು. ನಗರಸಭೆ, ಜಿಲ್ಲಾಡಳಿತದ ರಸ್ತೆ ಬಂದ್ ಮಾಡಿರೋದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆ ವ್ಯಕ್ತವಾಗಿದೆ.
ಎಲ್ಲೋ ಬೈಕ್ಗಳನ್ನು ನಿಲ್ಲಿಸಿ ಬರುವ ಗ್ರಾಮೀಣ ಭಾಗದ ಜನರು ದಿನಸಿ, ತರಕಾರಿ ಮೂಟೆಗಳನ್ನು ಹೊತ್ತುಕೊಂಡು ಹೋಗಬೇಕಾದ ಕಷ್ಟ ಅನುಭವಿಸಿದರು.
ದೊಡ್ಡಂಗಡಿ, ಚಿಕ್ಕಂಗಡಿ ಬೀದಿಯಷ್ಟೇ ಬಂದ್ ಮಾಡಲಾಗಿತ್ತು. ಉಳಿದಂತೆ ನಗರದ ಎಲ್ಲಾ ರಸ್ತೆಗಳಲ್ಲೂ ಸಂಚಾರ ಸಾಮಾನ್ಯವಾಗಿತ್ತು, ಅನಗತ್ಯ ಸಂಚಾರವೂ ಮಾಮೂಲಿಯಾಗಿತ್ತು.
ಇದನ್ನೂ ಓದಿ:ಪತಿಯ 11 ವರ್ಷಗಳ ಸೇವೆಗೆ ಜತೆಯಾದ ಪತ್ನಿ: ಅನಾಥ ಶವಸಂಸ್ಕಾರಕ್ಕೆ ಕೈತುಂಬ ಸಂಬಳದ ಕೆಲಸ ತ್ಯಜಿಸಿದ ಗಟ್ಟಿಗಿತ್ತಿ