ETV Bharat / state

ನಾಳೆ ಸೂರ್ಯಗ್ರಹಣ: ಚಾಮರಾಜನಗರದಲ್ಲಿ ಶೇ. 37ರಷ್ಟು ಗೋಚರ

ಚಾಮರಾಜನಗರ ಜಿಲ್ಲೆಯಲ್ಲಿ 10:11 ಗಂಟೆಗೆ ಗ್ರಹಣ ಪ್ರಾರಂಭವಾಗಲಿದ್ದು 11:44 ಗಂಟೆಗೆ ಗರಿಷ್ಠ ಪ್ರಮಾಣದ ಗ್ರಹಣ ಗೋಚರವಾಗಲಿದೆ. ಮಧ್ಯಾಹ್ನ 01:22 ಗ್ರಹಣ ಕೊನೆಗೊಳ್ಳಲಿದೆ ಎಂದು ಗ್ರಾವಿಟಿ ಸೈನ್ಸ್ ಫೌಂಡೇಶನ್​ನ ಅಭಿಷೇಕ್ ತಿಳಿಸಿದ್ದಾರೆ.

solar-eclipse
ಸೂರ್ಯಗ್ರಹಣ
author img

By

Published : Jun 20, 2020, 9:44 PM IST

ಚಾಮರಾಜನಗರ: ಖಗೋಳದ ಅಪರೂಪದ ವಿಸ್ಮಯವಾದ ಕಂಕಣ ಸೂರ್ಯಗ್ರಹಣ ಚಾಮರಾಜನಗರದಲ್ಲಿ ಶೇ. 37ರಷ್ಟು ಗೋಚರವಾಗಲಿದೆ.

ಈ ಕುರಿತು ಈಟಿವಿ ಭಾರತಕ್ಕೆ ಗ್ರಾವಿಟಿ ಸೈನ್ಸ್ ಫೌಂಡೇಶನ್​ನ ಅಭಿಷೇಕ್ ಮಾಹಿತಿ ನೀಡಿದ್ದು, ದೇಶಾದ್ಯಂತ ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ. ಉತ್ತರ ಭಾರತದ ರಾಜಸ್ಥಾನ, ಹರಿಯಾಣ, ಉತ್ತರಾಖಂಡ್​​ ಭಾಗಗಳಲ್ಲಿ ಸಂಪೂರ್ಣವಾಗಿ ಗೋಚರವಾಗಲಿದೆ. ಆದರೆ ಜಿಲ್ಲೆಯಲ್ಲಿ ಪಾರ್ಶ್ವ ಸೂರ್ಯಗ್ರಹಣ ವೀಕ್ಷಿಸಬಹುದಾಗಿದೆ.‌ ಚಾಮರಾಜನಗರ ಜಿಲ್ಲೆಯಲ್ಲಿ 10:11 ಗಂಟೆಗೆ ಗ್ರಹಣ ಪ್ರಾರಂಭವಾಗಲಿದ್ದು, 11:44 ಗಂಟೆಗೆ ಗರಿಷ್ಠ ಪ್ರಮಾಣದ ಗ್ರಹಣ ಗೋಚರವಾಗಲಿದೆ. ಮಧ್ಯಾಹ್ನ 01:22ಕ್ಕೆ ಗ್ರಹಣ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಗ್ರಹಣವು ಪ್ರಕೃತಿಯಲ್ಲಿನ ಅತ್ಯುತ್ತಮ ವಿದ್ಯಮಾನಗಳಲ್ಲಿ ಒಂದಾಗಿದ್ದು, ಇಂತಹ ಬಾಹ್ಯಾಕಾಶದ ಅದ್ಭುತ ಸಂದರ್ಭವನ್ನು ಜನರು ಮೂಢನಂಬಿಕೆಗಳಿಗೆ ಒಳಗಾಗದೆ ಸೌರ ಕನ್ನಡಕಗಳನ್ನು ಬಳಸಿ, ಇನ್ನಿತರ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ವೀಕ್ಷಿಸಬೇಕು ಎಂದಿದ್ದಾರೆ‌. ನಾಳೆ ಗಡಿಜಿಲ್ಲೆಯ ಬಹುತೇಕ ದೇಗುಲಗಳಲ್ಲಿ ಗ್ರಹಣ ಬಿಟ್ಟ ಬಳಿಕ ವಿಶೇಷ ಪೂಜೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.