ETV Bharat / state

ಚಾಮರಾಜನಗರ ಜ್ವರ ತಪಾಸಣಾ ಕೇಂದ್ರಕ್ಕೆ 'ಕೆಸರು' ರೋಗ

ಚಾಮರಾಜನಗರದ ಪೇಟೆಯ ಪ್ರಾಥಮಿಕ ಶಾಲೆ ಆವರಣ ಎರಡು ದಿನದಿಂದ ಸುರಿಯುತ್ತಿರುವ ಜೋರು ಮಳೆಗೆ ರಾಡಿಯೆದ್ದಿದೆ. ಇಲ್ಲಿ ಕೆಸರು ಗದ್ದೆ ಮಧ್ಯೆ ತಪಾಸಣೆ ಕೇಂದ್ರ ಸ್ಥಾಪಿಸಿದಂತಾಗಿದೆ.

Chamarajanagar fever checkpoint
ಚಾಮರಾಜನಗರ ಜ್ವರ ತಪಸಣಾ ಕೇಂದ್ರ
author img

By

Published : Jun 27, 2020, 3:49 PM IST

ಚಾಮರಾಜನಗರ: ಕೊರೊನಾ ಭೀತಿಯಲ್ಲಿ ಜ್ವರ ತಪಾಸಣೆಗೆ ಜನರು ಜೀವ ಕೈಯಲ್ಲಿ ಹಿಡಿದು ಬರಬೇಕಿದೆ. ಏಕೆಂದರೆ ಇಲ್ಲಿ ಕೋವಿಡ್ ಖಾಯಿಲೆ ಭಯಕ್ಕಿಂತ ಕೆಸರಲ್ಲಿ ಜಾರಿ ಬಿದ್ದು ಮೂಳೆ ಮುರಿಯುವ ಆತಂಕವೇ ಹೆಚ್ಚಾಗಿದೆ.

ಚಾಮರಾಜನಗರದ ಪೇಟೆ ಪ್ರಾಥಮಿಕ ಶಾಲೆ ಆವರಣದಲ್ಲಿ ಎರಡು ದಿನ ಸುರಿದ ಮಳೆಗೆ ರಾಡಿ ಎದ್ದಿದೆ. ಇಲ್ಲಿ ಕೆಸರು ಗದ್ದೆ ಮಧ್ಯೆ ತಪಾಸಣೆ ಕೇಂದ್ರ ಸ್ಥಾಪಿಸಿದಂತಾಗಿದ್ದು 100-150 ಮೀ. ಜನರು ಕೆಸರಿನಲ್ಲೇ ಹೆಜ್ಜೆ ಹಾಕಬೇಕಿದೆ.

ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಿದಂತೆಲ್ಲಾ ಬಫರ್ ಝೋನಿನ ಜನರು, ಕೊರೊನಾ ಶಂಕಿತರು, ಗರ್ಭಿಣಿಯರು, ಬೆಂಗಳೂರು ಮತ್ತಿತರೆ ಹಾಟ್​ಸ್ಪಾಟ್ ಸ್ಥಳಗಳಿಂದ ಬಂದವರು ಜ್ವರ ತಪಾಸಣೆ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಆದರೆ ತಪಾಸಣೆ ಕೇಂದ್ರದ ಶಾಮಿಯಾನದ ಕೆಳಗೆ ನೀರು ನಿಂತು ಕೊಚ್ಚೆಯಂತ ವಾತಾವರಣವಿದೆ.

ಇನ್ನಾದರೂ ಜ್ವರ ತಪಾಸಣೆ ಕೇಂದ್ರದಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆಯಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಪಾಸಣಾ ಕೇಂದ್ರದ ಆವರಣದಲ್ಲಿ ಟಾಟಾ ಏಸ್ ಆಟೋ ಚಾಲಕರು ಗುಂಪುಗೂಡಿ ಸಿಗರೇಟ್ ಸೇದುವ ಆರೋಪವೂ ಕೇಳಿಬಂದಿದೆ. ಈ ಕುರಿತು ಸಂಬಂಧಪಟ್ಟವರು ಕ್ರಮ ವಹಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.